ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಧ್ಯಾಹ್ನದ ಊಟ:ಮಕ್ಕಳಿಗೆ ಕೊಟ್ಟ ಅಕ್ಕಿ-ಬೇಳೆಯಲ್ಲಿ ಹುಳಗಳ ರಾಶಿ

ತುಮಕೂರು:ಮಧ್ಯಾಹ್ನದ ಊಟ ಯೋಜನೆಯಡಿ ಶಾಲಾ ಮಕ್ಕಳಿಗೆ ಕೊಡಲಾಗುವ ಅಕ್ಕಿ-ಬೇಳೆಯ ಚೀಲದಲ್ಲೀಗ ಹುಳಗಳೇ ತುಂಬಿವೆ. ಇಲ್ಲಿಯ ತಿಪಟೂರಿನ ಹೊನ್ನವಳ್ಳಿ ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಹುಡುಗಿಯೊಬ್ಬಳು ತನಗೆ ಸಿಕ್ಕ ಅಕ್ಕಿ-ಬೇಳೆಯಲ್ಲಿರೋ ಹುಳಗಳನ್ನ ತೋರಿಸಿ ಬೇಸರ ವ್ಯಕ್ತಪಡಿಸಿದ್ದಾರೆ.

ಸರ್ಕಾರದ ಯೋಜನೆಗಳು ದೇವರಿಗೇನೆ ಪ್ರೀತಿ. ಮಕ್ಕಳು ಏನು ಮಾಡಿಯಾರು ? ಮಕ್ಕಳಿಗೆ ಕೊಡುವ ದವಸ-ಧಾನ್ಯದಲ್ಲೂ ಹುಳ ಇದ್ದರೇ ಹೇಗೆ ? ಈ ಪ್ರಶ್ನೆಯನ್ನ ಈಗ ಹೊನ್ನವಳ್ಳಿ ಗ್ರಾಮದ ಶಾಲೆಯ ಹುಡುಗಿ ಕೇಳುತ್ತಿದ್ದಾಳೆ. ಹಾಗೆ ಕೇಳುವ ಸಮಯದಲ್ಲಿಯೇ ವೀಡಿಯೋ ಕೂಡ ಮಾಡಲಾಗಿದೆ. ಆ ವೀಡಿಯೋವನ್ನ ದೇವರಾಜ್ ಹಿರೇಹಳ್ಳಿ ಬೈರಯ್ಯ ಅನ್ನೋರು ತಮ್ಮ ಟ್ವಿಟರ್ ಪೇಜ್ ನಲ್ಲಿ ಹಾಕಿ ಸರ್ಕಾರದ ಗಮನ ಸೆಳೆಯೋ ಕೆಲಸ ಮಾಡಿದ್ದಾರೆ.

Edited By :
PublicNext

PublicNext

16/10/2021 05:03 pm

Cinque Terre

70.49 K

Cinque Terre

3