ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಸ್ಮಾರ್ಟ್ ಶಿಕ್ಷಣದತ್ತ ಶಾಸಕಿ ಹೆಬ್ಬಾಳಕರ್ ಲಕ್ಷ್ಯ: ಮೊದಲ ಹಂತದಲ್ಲಿ 20 ಸ್ಮಾರ್ಟ್ ಕೊಠಡಿ ನಿರ್ಮಾಣ

ಬೆಳಗಾವಿ: ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಪ್ರತಿಯೊಂದು ಶಾಲೆಯಲ್ಲಿಯೂ ಸ್ಮಾರ್ಟ್ ಕ್ಲಾಸ್ ರೂಂ ನಿರ್ಮಾಣ ಮಾಡುವ ಯೋಜನೆ ಹಮ್ಮಿಕೊಂಡಿದ್ದು, ಮೊದಲ ಹಂತದಲ್ಲಿ 20 ಕ್ಲಾಸ್ ರೂಂ ಸಿದ್ಧವಾಗಿದೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ತಿಳಿಸಿದ್ದಾರೆ.

ಉಚಗಾಂವ ಹಾಗೂ ಬಿಜಗರಣಿ ಗ್ರಾಮಗಳ ಹಿರಿಯ ಪ್ರಾಥಮಿಕ ಶಾಲೆಗಳ ಸ್ಮಾರ್ಟ್ ಕ್ಲಾಸ್ ರೂಮ್ ಉದ್ಘಾಟಸಿ ಮಾತನಾಡಿದ ಅವರು, ನಾನು ಶಾಸಕಿಯಾದ ನಂತರ ಮೊದಲ ಬಾರಿಗೆ ದೆಹಲಿಗೆ ಹೋದ ಸಂದರ್ಭದಲ್ಲಿ ಅಲ್ಲಿನ ಸರಕಾರಿ ಶಾಲೆಗಳನ್ನು ಗಮನಿಸಿ ನಮ್ಮ ಕ್ಷೇತ್ರದಲ್ಲೂ ಅದೇ ಮಾದರಿಯ ಕ್ಲಾಸ್ ರೂಂ ಮಾಡಬೇಕೆನ್ನುವ ಕನಸು ಹೊತ್ತು ಬಂದೆ. ಸಿಎಸ್ಆರ್ ಅನುದಾನ ತಂದು ಇದೀಗ 20 ಶಾಲೆಗಳ ಕೊಠಡಿಗಳನ್ನು ಸ್ಮಾರ್ಟ್ ಮಾಡಲಾಗಿದೆ.

ಮುಂದಿನ ದಿನಗಳಲ್ಲಿ ಪ್ರತಿ ಶಾಲೆಯನ್ನೂ ಸ್ಮಾರ್ಟ್ ಆಗಿ ಪರಿವರ್ತಿಸಲಾಗುವುದು ಎಂದು ಅವರು ತಿಳಿಸಿದರು.

ಶಿಕ್ಷಣವಿದ್ದರಷ್ಟೆ ಜನರ ಅಭಿವೃದ್ಧಿ, ಕ್ಷೇತ್ರದ ಅಭಿವೃದ್ಧಿ. ಜೊತೆಗೆ ಗುಣಮಟ್ಟದ ಶಿಕ್ಷಣ ಇಂದಿನ ಮಕ್ಕಳಿಗೆ ಅಗತ್ಯ. ನಾವು ಕಲಿಯುವಾಗ ಈ ಅವಕಾಶ ಸಿಗಲಿಲ್ಲ. ಆದರೆ ನಮ್ಮ ಮಕ್ಕಳನ್ನು ಇದರಿಂದ ವಂಚಿತಗೊಳಿಸಬಾರದು ಎನ್ನುವುದು ನನ್ನ ಉದ್ದೇಶ ಎಂದು ಹೆಬ್ಬಾಳಕರ್ ಹೇಳಿದರು.

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಸುಮಾರು 400ಕ್ಕೂ ಹೆಚ್ಚು ಎಲ್ಲ ಭಾಷೆ ಹಿರಿಯ ಪ್ರಾಥಮಿಕ ಶಾಲಾ ಕ್ಲಾಸ್ ರೂಮ್ ಗಳು ನಿರ್ಮಾಣವಾಗಿದ್ದು, ಅವುಗಳ ಪೈಕಿ ಈಗಾಗಲೇ 20 ಕ್ಲಾಸ್ ರೂಮ್ ಗಳನ್ನು ಸ್ಮಾರ್ಟ್ ಕ್ಲಾಸ್ ರೂಮ್ ಗಳನ್ನಾಗಿ ಪರಿವರ್ತಿಸಲಾಗಿದೆ. ಈ 20 ಸ್ಮಾರ್ಟ್ ಕ್ಲಾಸ್ ಗಳ ಪೈಕಿ ಉಚಗಾಂವ ಹಾಗೂ ಬಿಜಗರಣಿ ಗ್ರಾಮಗಳ ಹಿರಿಯ ಪ್ರಾಥಮಿಕ ಶಾಲೆಗಳ ಸ್ಮಾರ್ಟ್ ಕ್ಲಾಸ್ ರೂಮ್ ಗಳನ್ನು ಉದ್ಘಾಟಸಲಾಯಿತು. ಬೆಳಗಾವಿ ಗ್ರಾಮೀಣ ಕ್ಷೇತ್ರದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಸ್ಮಾರ್ಟ್ ಕ್ಲಾಸ್ ಗಳು ನಿರ್ಮಾಣಗೊಂಡಿವೆ.

Edited By : Shivu K
PublicNext

PublicNext

05/10/2021 09:51 am

Cinque Terre

36.8 K

Cinque Terre

1