ಬೆಂಗಳೂರು: ದಸರಾ ಬಳಿಕ 1ರಿಂದ 5ನೇ ತರಗತಿ ಆರಂಭಕ್ಕೆ ಚಿಂತನೆ ನಡೆಸಲಾಗಿದೆ ಎಂದು ಬೆಂಗಳೂರಿನಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಿಕ್ಷಣ ಸಚಿವರು, "ಈ ವಾರದಲ್ಲಿ ಸಿಎಂ ಬೊಮ್ಮಾಯಿ ಹಾಗೂ ಕೋವಿಡ್ ತಾಂತ್ರಿಕಾ ಸಲಹಾ ಸಮಿತಿ ಜೊತೆಗೆ ಚರ್ಚೆ ನಡೆಸಲಾಗುವುದು. ಸಭೆಯಲ್ಲಿ ಒಂದರಿಂದ ಐದರವರೆಗೆ ಶಾಲೆಗಳ ಆರಂಭಕ್ಕೆ ಮನವಿ ಮಾಡುತ್ತೇವೆ. ಆದರೆ ಸದ್ಯ ವೈರಲ್ ಇನ್ಫೆಕ್ಷನ್ ಡೆಂಘೀ ಜ್ವರದ ಕಾಟ ಇದೆ. ಹೀಗಾಗಿ 3,4,5 ನೇ ತರಗತಿ ಆರಂಭಿಸಲಾದರೂ ಅನುಮತಿ ನೀಡುವಂತೆ ಮನವಿ ಮಾಡಲಿದ್ದೇವೆ" ಎಂದರು.
PublicNext
29/09/2021 07:44 pm