ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸೆ. 20ಕ್ಕೆ ಕೆಸಿಇಟಿ ಫಲಿತಾಂಶ

ಆಗಸ್ಟ್ 28 ಮತ್ತು 29 ರಂದು ನಡೆದಿದ್ದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯ (KCET-2021) ಫಲಿತಾಂಶವನ್ನು ಸೆಪ್ಟೆಂಬರ್ 20 ರಂದು ಆನ್ ಲೈನ್ ನಲ್ಲಿ ಪ್ರಕಟಿಸುವ ಸಾಧ್ಯತೆಯಿದೆ. ಪರೀಕ್ಷೆ ಬರೆದ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಅಧಿಕೃತ ವೆಬ್ ಸೈಟ್ – cetonline.karnataka.gov.in ನಲ್ಲಿ ಫಲಿತಾಂಶವನ್ನು ಪರಿಶೀಲಿಸಬಹುದು.

ಕರ್ನಾಟಕ ಸಿಇಟಿ ಫಲಿತಾಂಶವು ಅಭ್ಯರ್ಥಿಗಳು ಪಡೆದ ವಿಷಯವಾರು ಅಂಕಗಳು, ಒಟ್ಟು ಅಂಕಗಳು ಮತ್ತು ಶ್ರೇಣಿಯನ್ನು ಒಳಗೊಂಡಿರುತ್ತದೆ. KEA ಫಲಿತಾಂಶ ಘೋಷಣೆಯೊಂದಿಗೆ KCET 2021 ಟಾಪರ್ ಗಳ ಪಟ್ಟಿಯನ್ನೂ ಸಹ ಬಿಡುಗಡೆ ಮಾಡಲಿದೆ. ಅರ್ಹ ಅಭ್ಯರ್ಥಿಗಳು ಕೆಸಿಇಟಿ 2021 ಕೌನ್ಸೆಲಿಂಗ್ ಮತ್ತು ಸೀಟು ಹಂಚಿಕೆಯಲ್ಲಿ ಭಾಗವಹಿಸಲು ಅರ್ಹತೆ ಪಡೆಯಲಿದ್ದಾರೆ.

Edited By : Nirmala Aralikatti
PublicNext

PublicNext

18/09/2021 10:10 pm

Cinque Terre

29.41 K

Cinque Terre

0