ದೊಡ್ಡಬಳ್ಳಾಪುರ: ಆಧುನಿಕ ವಿದ್ಯೆ ಕಲಿಯುತ್ತಿರುವ ಇವತ್ತಿನ ಮಕ್ಕಳು ಆಧ್ಯಾತ್ಮಿಕ ವಿದ್ಯೆಯ ನ್ನೂ ರೂಢಿಸಿಕೊಂಡರೆ ಅವರ ಬದುಕು ಹಸನಾಗುತ್ತೆ ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ದೊಡ್ಡಬಳ್ಳಾಪುರ ತಾಲೂಕಿನ ನೇರಳೆಘಟ್ಟ ಗ್ರಾಮದಲ್ಲಿ ನೂರು ವರ್ಷಗಳ ಶ್ರೀ ಆಂಜನೇಯ ಸ್ವಾಮಿ ಮತ್ತು ಶ್ರೀ ಮಹೇಶ್ವರಿ ನೂತನ ದೇವಾಲಯ ಮತ್ತು ಪುನರ್ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ಪ್ರತಿಷ್ಠಾ ಕಾರ್ಯ ನೆರವೇರಿಸಿದರು. ಬಳಿಕ ಪ್ರವಚನ ನೀಡಿದರು.
ಮಾಧ್ಯಮದೊಂದಿಗೆ ಮಾತನಾಡಿದ ಸ್ವಾಮೀಜಿ, ಎಲ್ಲೆಡೆಯೂ ಆಧುನಿಕತೆ ತಾಂಡವವಾಡುತ್ತಿರುವ ಇವತ್ತಿನ ದಿನಗಳಲ್ಲಿ ಆಧ್ಯಾತ್ಮಿಕತೆಗೂ ಬಹು ಪ್ರಾಮುಖ್ಯತೆ ಇದೆ. ಇವತ್ತಿನ ಮಕ್ಕಳು ಆಧುನಿಕತೆಯ ವಿದ್ಯೆಯನ್ನು ಕಲಿಯುವುದರ ಜೊತೆಗೆ ಆಧ್ಯಾತ್ಮಿಕ ವಿದ್ಯೆಯನ್ನೂ ರೂಢಿಸಿಕೊಳ್ಳಬೇಕು ಎಂದರು.
PublicNext
26/11/2021 10:59 am