ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಸ್‌ಎಸ್‌ಎಲ್‌ಸಿ ಪರೀಕ್ಷಾ ದಿನಾಂಕ ಪ್ರಕಟ

ಬೆಂಗಳೂರು: ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಮೊದಲ ಹಂತವಾಗಿ ಮಾರ್ಚ್ 28ರಿಂದ ಏಪ್ರಿಲ್ 11ರವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ನಡೆಸಲು ತೀರ್ಮಾನಿಸಿದೆ.

ಪರೀಕ್ಷಾ ವೇಳಾಪಟ್ಟಿಗೆ ಅಭ್ಯರ್ಥಿಗಳು/ ಪೋಷಕರು ಆಕ್ಷೇಪಣೆ ಸಲ್ಲಿಸಲು ಜನವರಿ 6-14 ರವರೆಗೆ ಅವಕಾಶ ಕಲ್ಪಿಸಲಾಗಿದೆ. ಆಕ್ಷೇಪಣೆಗಳಿದ್ದಲ್ಲಿ ಮಂಡಳಿಯ ಅಂತರ್ಜಾಲ www.sslc.karnataka.gov.in ಅಥವಾ dpikseeb@gmail.com ಇ-ಮೇಲ್ ಮೂಲಕ ಅಥವಾ ನಿರ್ದೇಶಕರು(ಪರೀಕ್ಷೆಗಳು)ಗೆ ಸಲ್ಲಿಸಬಹುದಾಗಿದೆ.

ಪರೀಕ್ಷಾ ಸಮಯ: ಬೆಳಗ್ಗೆ 10:30 - ಮಧ್ಯಾಹ್ನ 1:45

ಪ್ರತಿ ವಿಷಯಕ್ಕೂ ಪ್ರಶ್ನೆ ಪತ್ರಿಕೆ ಓದಲು 15 ನಿಮಿಷಗಳನ್ನು ನೀಡಲಾಗುತ್ತದೆ.

ತಾತ್ಕಾಲಿಕ ವೇಳಾಪಟ್ಟಿ ಹೀಗಿದೆ:

28-3-2022- ಪ್ರಥಮ ಭಾಷೆ

30-3-2022- ದ್ವಿತೀಯ ಭಾಷೆ

1-4-2022- ಅರ್ಥಶಾಸ್ತ್ರ, ಕೋರ್ ಸಬ್ಜೆಕ್ಟ್

4-4-2022- ಗಣಿತ, ಸಮಾಜಶಾಸ್ತ್ರ

6-4-2022- ಸಮಾಜ ವಿಜ್ಞಾನ

8-4-2022- ತೃತೀಯ ಭಾಷೆ

11-4-2022- ವಿಜ್ಞಾನ, ರಾಜ್ಯಶಾಸ್ತ್ರ, ಕರ್ನಾಟಕ/ ಹಿಂದೂಸ್ತಾನಿ ಸಂಗೀತ

Edited By : Vijay Kumar
PublicNext

PublicNext

06/01/2022 07:39 pm

Cinque Terre

78.72 K

Cinque Terre

1

ಸಂಬಂಧಿತ ಸುದ್ದಿ