ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮತಾಂತರ ನಿಷೇಧ ವಿಧೇಯಕದಲ್ಲಿರುವ ಅಂಶಗಳ ಬಗ್ಗೆ ಮಾಹಿತಿ

ಬೆಳಗಾವಿ: ವಿರೋಧ ಪಕ್ಷಗಳ ವಿರೋಧದ ಮಧ್ಯೆಯೂ ವಿರೋಧಗಳ ನಡುವೆಯೂ ರಾಜ್ಯ ಸರ್ಕಾರ ಇಂದು ಸದನದಲ್ಲಿ ಮತಾಂತರ ನಿಷೇಧ ಕಾಯಿದೆ ಮಂಡಿಸಿದೆ.

ಕಾಯ್ದೆಯಲ್ಲಿವ ಪ್ರಮುಖ ಅಂಶಗಳು ಇವೇ ನೋಡಿ..

ಒಟ್ಟು 14 ಸೆಕ್ಷನ್ ಗಳಿರುವ ಮತಾಂತರ ನಿಷೇಧ ವಿಧೇಯಕ ಮಂಡನೆಯಾಗಿದ್ದು, ನಾಳೆ ಅಧಿವೇಶನದಲ್ಲಿ ಚರ್ಚೆಗೆ ಅವಕಾಶ ನೀಡಲಾಗಿದೆ.

ಪ್ರಮುಖ ಅಂಶಗಳು:

* ಮತಾಂತರಕ್ಕೆ 60 ದಿನಗಳ ಮೊದಲು ಫಾರ್ಮ್ 1 ನ್ನು ಭರ್ತಿ ಮಾಡಿ ಜಿಲ್ಲಾಧಿಕಾರಿ ಬಳಿ ಮಾಹಿತಿ ನೀಡಬೇಕು.

* ಮತಾಂತರ ಮಾಡಿಸುವ ವ್ಯಕ್ತಿ ಕೂಡ ಒಂದು ತಿಂಗಳ ಮೊದಲು ಫಾರ್ಮ್ 2 ಭರ್ತಿ ಮಾಡಿ ಜಿಲ್ಲಾಧಿಕಾರಿಗೆ ನೀಡಬೇಕು.

* ಮತಾಂತರದ ಒಂದು ತಿಂಗಳ ಬಳಿಕ ಘೋಷಣಾ ಪತ್ರವನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ ಮುಂದೆ ನೀಡಬೇಕು.

* ಘೋಷಣಾ ಪತ್ರ ನೀಡಿದ 21 ದಿನಗಳ ಬಳಿಕ ಮತಾಂತರ ಹೊಂದಿದ ವ್ಯಕ್ತಿ ಖುದ್ದು ಹಾಜರಾಗಿ ಗುರುತು ನೀಡಬೇಕು ಹಾಗೂ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತಾಂತರೋತ್ತರ ಘಟನೆಗಳ ಸಂಪೂರ್ಣ ಘಟನೆ ದಾಖಲಿಸಬೇಕು.

* ತಕರಾರು ಇದ್ದಲ್ಲಿ ವ್ಯಕ್ತಿ ಹಾಗೂ ಸಂಪೂರ್ಣ ವಿವರಣೆ ದಾಖಲಿಸಬೇಕು.

* ಮತಾಂತರವಾದರೆ ಜಿಲ್ಲಾ ದಂಡಾಧಿಕಾರಿ ದೃಢೀಕರಿಸಿದ ಪತ್ರ ನೀಡತಕ್ಕದ್ದು.

* ಮತಾಂತರ ಹೊಂದಿದ ವ್ಯಕ್ತಿಯ ಸಾಮಾಜಿಕ ಸ್ಥಾನಮಾನ, ಆರ್ಥಿಕ ಲಾಭಗಳ ಬಗ್ಗೆಯೂ ಮಾಹಿತಿ.

* ತಪ್ಪು ವಿವರಣೆ, ಮೋಸ, ಬಲವಂತದ ಮತಾಂತರ, ಆಮಿಷ, ಆಕರ್ಷಣೆ, ಮದುವೆ ಮೂಲಕ ಮತಾಂತರಕ್ಕೆ ನಿಷೇಧ.

* ನೊಂದ ವ್ಯಕ್ತಿ, ವ್ಯಕ್ತಿಯ ಪೋಷಕರು, ಸಹೋದರ, ಸಹೋದರಿ, ಸಂಬಂಧಿಕರು ಅಥವಾ ದತ್ತು ಪಡೆದವರು ದೂರು ನೀಡಲು ಅವಕಾಶ

ಶಿಕ್ಷೆ ಪ್ರಮಾಣ:

* ನಿಯಮ ಬಾಹಿರ ಮತಾಂತರ ಸಾಬೀತಾದರೆ 3-5 ವರ್ಷ ಜೈಲು ಹಾಗೂ 25 ಸಾವಿರ ರೂ. ದಂಡ.

* ವಯಸ್ಕರಲ್ಲದ, ಮಹಿಳೆ ಹಾಗೂ ಪರಿಶಿಷ್ಠ ವರ್ಗ, ಪಂಗಡದವರ ನಿಯಮ ಬಾಹಿರ ಮತಾಂತರ 3-10 ವರ್ಷ ಶಿಕ್ಷೆ ಹಾಗೂ 35 ಸಾವಿರ ದಂಡ.

Edited By : Nirmala Aralikatti
PublicNext

PublicNext

21/12/2021 09:58 pm

Cinque Terre

60.54 K

Cinque Terre

3

ಸಂಬಂಧಿತ ಸುದ್ದಿ