ಬೆಂಗಳೂರು : ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ಬಿಸಿಯೂಟ ಯೋಜನೆ ನಂ.1 ರಿಂದ ಪುನರಾರಂಭವಾಗಲಿದೆ ಎಂದು ರಾಜ್ಯ ಸರ್ಕಾರ ಹೇಳಿದೆ. ನವೆಂಬರ್ 1, 2021ರಿಂದ ಬಿಸಿಯೂಟ ಹಾಗೂ ಬಿಸಿ ಹಾಲು ವಿತರಣೆ ಮಾಡುವ ಮೂಲಕ ರಾಜ್ಯದ ಶಾಲೆಗಳಲ್ಲಿ ವಿದ್ಯುಕ್ತವಾಗಿ ಸ್ಥಗಿತಗೊಂಡಿದ್ದಂತ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಆರಂಭಿಸೋದಕ್ಕೆ ರಾಜ್ಯ ಸರ್ಕಾರ ಆದೇಶಿಸಿದೆ.
ಈ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಮಧ್ಯಾಹ್ನ ಉಪಹಾರ ಯೋಜನೆ ಜಂಟಿ ನಿರ್ದೇಶಕರಾದಂತ ಟಿ.ನಾರಾಯಣಗೌಡ ರಾಜ್ಯದ ಎಲ್ಲಾ ಶಿಕ್ಷಣಾಧಿಕಾರಿಗಳಿಗೆ ಪತ್ರ ಬರೆದಿದ್ದು, 2021-22ನೇ ಸಾಲಿನ ಮಧ್ಯಾಹ್ನ ಉಪಹಾರ ಯೋಜನೆಯಡಿ 1 ರಿಂದ 10ನೇ ತರಗತಿ ಮಕ್ಕಳಿಗೆ ಶಾಲೆಯಲ್ಲಿ ಬಿಸಿಯೂಟವನ್ನು ಪ್ರಾರಂಭಿಸುವ ಕುರಿತು ಸರ್ಕಾರದ ಹಂತದಲ್ಲಿ ನಿರ್ಧಾರ ತೆಗೆದುಕೊಳ್ಳಬೇಕಾಗಿದ್ದು, ಕೆಲವೊಂದು ಕ್ರಮಗಳನ್ನು ಅನುಸರಿಸುವ ಬಗ್ಗೆ ಕರಡು ಪ್ರಸ್ತಾವನೆಯನ್ನು ನಿಮ್ಮ ಅಭಿಪ್ರಾಯ ಅಥವಾ ಸಲಹೆಗಳೇನಾದರೂ ಇದ್ದಲ್ಲಿ ಕೂಡಲೇ ದಿನಾಂಕ 04-10-2021ರೊಳಗೆ ಸಲ್ಲಿಸಲು ತಿಳಿಸಿದ್ದಾರೆ.
PublicNext
02/10/2021 03:17 pm