ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕ್ಲಾಸ್‌ನಲ್ಲಿ ನಿದ್ದೆ ಮಾಡ್ತಿದ್ದ ಟೀಚರ್‌ಗೆ ಗಾಳಿ ಬೀಸಿದ ವಿದ್ಯಾರ್ಥಿನಿ: ವಿಡಿಯೋ

ಬಿಹಾರ: ತಾಯಿ ಸಂಸ್ಕಾರ ಕಲಿಸಿದ್ರೆ ಶಿಕ್ಷಕಿ ಅಕ್ಷರ ಕಲಿಸುತ್ತಾರೆ. ಬದುಕಿನ ಭವಿಷ್ಯ ರೂಪಿಸುತ್ತಾರೆ. ಆದ್ರೆ ಇಲ್ಲೊಬ್ಬ ಶಿಕ್ಷಕಿ ತರಗತಿಯಲ್ಲೇ ನಿದ್ದೆ ಮಾಡ್ತಿದ್ದಾರೆ. ನಿದ್ದೆ ಮಾಡುತ್ತಿರುವ ಆಕೆಗೆ ವಿದ್ಯಾರ್ಥಿನಿಯೊಬ್ಬಳು ಗಾಳಿ ಬೀಸಿದ್ದಾಳೆ.

ಈ ವಿಡಿಯೋ ವೈರಲ್ ಆಗಿದ್ದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಬಿಹಾರದ ಶಾಲೆಯೊಂದರಲ್ಲಿ ನಡೆದ ಘಟನೆ ಇದಾಗಿದೆ. ನಂತರ ಕಾರಣ ಕೇಳಿದಾಗ ನನಗೆ ಆರೋಗ್ಯ ಸರಿ ಇರಲಿಲ್ಲ ಹೀಗಾಗಿ ಮಲಗಿದ್ದೆ ಎಂದು ಶಿಕ್ಷಕಿ ಸಮಜಾಯಿಷಿ ಕೊಟ್ಟಿದ್ದಾಳೆ. ಸದ್ಯ ಶಿಕ್ಷಕಿ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಗಳು ಕೇಳಿ ಬರುತ್ತಿವೆ.

Edited By : Nagaraj Tulugeri
PublicNext

PublicNext

07/06/2022 06:53 pm

Cinque Terre

77.39 K

Cinque Terre

9

ಸಂಬಂಧಿತ ಸುದ್ದಿ