ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಾರೆ ಕೆಲಸಗಾರನ ಪುತ್ರಿ ಈಗಾ ಚಿನ್ನದ ಹುಡುಗಿ

ದಾವಣಗೆರೆ : ಕೊರೊನಾ ವಿಷಮ ಪರಿಸ್ಥಿತಿಯ ಮಧ್ಯೆಯೂ ತಂತ್ರಜ್ಞಾನ ಮೂಲಕ ದಾವಣಗೆರೆ ವಿಶ್ವವಿದ್ಯಾಲಯದ 7ನೇ ಘಟಿಕೋತ್ಸವ ನಡೆಯಿತು.

ಇನ್ನೂ ಘಟಿಕೋತ್ಸವದಲ್ಲಿ ಬಿಪಿಇಡಿ ಪದವಿಯಲ್ಲಿ ಪ್ರಥಮ ಸ್ಥಾನ ಪಡೆದಿರುವ ತುಮಕೂರು ಜಿಲ್ಲೆ ವಿ.ಜಿ. ಪಾಳ್ಯದ ಗಾರೆ ಕೆಲಸಗಾರನ ಮಗಳು ಅರ್ಪಿತಾ ವಿ.ಕೆ. ಚಿನ್ನದ ಹುಡುಗಿಯಾಗಿ ಮಿಂಚಿದ್ದಾರೆ.

ಸ್ವತಃ ಕಬಡ್ಡಿ ಪಟುವಾಗಿರುವ ಅರ್ಪಿತಾ ಮಲ್ಲಾಡಿಹಳ್ಳಿಯ ಸೆಂಟಿನರಿ ಕಾಲೇಜ್ ಆಫ್ ಫಿಜಿಕಲ್ ಎಜುಕೇಶನ್ ನಲ್ಲಿ ಬಿಪಿಇಡಿ ವ್ಯಾಸಂಗ ಮಾಡಿದ್ದಾರೆ.

‘‘ಓದು ಮುಂದುವರಿಸಲು ಆರ್ಥಿಕ ಸಮಸ್ಯೆ ಇರುವುದರಿಂದ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದೇನೆ. ಅದೇ ವೃತ್ತಿಯಲ್ಲೇ ಉತ್ತಮ ಸಾಧನೆ ಮಾಡುವ ಉದ್ದೇಶ ಹೊಂದಿದ್ದೇನೆ’’ ಒಂದು ಚಿನ್ನದ ಪದಕ ಸ್ವೀಕರಿಸಿದ ಅರ್ಪಿತಾ.

ಇನ್ನೂ ಖಾಸಗಿ ಬಸ್ ಚಾಲಕನ ಮಗಳು ಅಕ್ಷತಾ ಜಿ.ವಿ. ಜಂಬುಲಿಂಗನಹಳ್ಳಿಯ ದಾವಣಗೆರೆಯ ಎಂ.ಎಸ್.ಬಿ. ಕಾಲೇಜಿನಲ್ಲಿ ಓದಿ ಬಿಎ ಪದವಿಯಲ್ಲಿ ಮೊದಲ ಸ್ಥಾನಗಳಿಸಿದ್ದು, 3 ಸ್ವರ್ಣ ಪದಕಗಳನ್ನು ಮುಡಿಗೇರಿಸಿಕೊಂಡರು.

ಬಳ್ಳಾರಿ ಜಿಲ್ಲೆ ಕೋಗಳಿಯ ಅಕ್ಷತಾ ಕೆ.ಎನ್. ಎಂಬಿಎ ಎಚ್ ಆರ್ ನಲ್ಲಿ ಒಂದು ಪದಕ ಪಡೆದಿದ್ದಾರೆ.

ಮಡಿಕೇರಿ ಮೂಲದ ಪೊನ್ನಣ್ಣ ಎಂ.ಬಿ. ಎಂಎಸ್ಸಿ ಮೈಕ್ರೋಬಯಾಲಜಿ ವಿಷಯದಲ್ಲಿ ಮೊದಲ ಸ್ಥಾನ ಗಳಿಸಿದ್ದಾರೆ.

Edited By : Nirmala Aralikatti
PublicNext

PublicNext

01/10/2020 10:27 am

Cinque Terre

72.76 K

Cinque Terre

1