ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೋರಾಟಕ್ಕೆ ಮುಂದಾದ ಖಾಸಗಿ ಶಿಕ್ಷಣ ಸಂಸ್ಥೆಗಳು

ಬೆಂಗಳೂರು; ಕೊರೋನಾ ಎರಡನೇ ಅಲೆ ಬರಲಿದೆ ಎಂಬ ಭೀತಿಯ ನಡುವೆಯೂ ಜನವರಿ 1 ರಿಂದ ಶಾಲಾ ಕಾಲೇಜುಗಳನ್ನು ತೆರೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಸಿಎಂ ಬಿ.ಎಸ್. ಯಡಿಯೂರಪ್ಪ ಈ ಸಂಬಂಧ ಶನಿವಾರ ಅಧಿಕೃತ ಅಧಿಸೂಚನೆಯನ್ನೂ ಹೊರಡಿಸಿದ್ದರು.

ಆದರೆ, ಇನ್ನೇನು ಶಾಲೆಗಳು ಆರಂಭವಾಗಲಿವೆ ಎನ್ನುತ್ತಿರುವಾಗಲೇ ಖಾಸಗಿ ಶಾಲೆಗಳು ಇದೀಗ ಮತ್ತೊಮ್ಮೆ ಹೋರಾಟಕ್ಕೆ ಮುಂದಾಗಿವೆ. ಅಲ್ಲದೆ, ಇಂದಿನಿಂದ ಆನ್​ಲೈನ್​ ತರಗತಿಗಳನ್ನೂ ಬಂದ್​ ಮಾಡುವ ನಿರ್ಧಾರವನ್ನು ಕೈಗೊಂಡಿವೆ. ರುಪ್ಸಾ ಖಾಸಗಿ ಶಾಲೆಗಳ ಒಕ್ಕೂಟ ಶಾಲೆಗಳನ್ನು ಮುಚ್ಚುವುದಾಗಿ ಹೇಳಿದ್ದು ತಮ್ಮ ಬೇಡಿಕೆ ಈಡೇರಿಸುವವರೆಗೆ ಶಾಲೆಗಳನ್ನು ಆರಂಭಿಸುವುದಿಲ್ಲ ಎಂದು ಸರ್ಕಾರಕ್ಕೆ ಬೆದರಿಕೆ ಹಾಕಿವೆ.​

ಮೂರುವರೆ ಸಾವಿರ ಮರು ನೋಂದಣಿಗೆ ಸಲ್ಲಿಸಿದ ಶಾಲೆಗಳು ಅನುಮತಿ ನೀಡಬೇಕು, ಅದಾಲತ್ ರೂಪದಲ್ಲಿ ಏಕಕಾಲಕ್ಕೆ ಅರ್ಜಿಗಳನ್ನ ವಿಲೇವಾರಿ ‌ಮಾಡಿ 124 ಶಾಲೆಗಳ ಮುಚ್ಚುವ ಆಲೋಚನೆ ನಿರ್ಧಾರ ಹಿಂಪಡೆಯಬೇಕು, 25 ವರ್ಷಗಳಿಂದ ಅನುದಾನಕ್ಕೆ ಒಳಪಡದೆ ಇದ್ದ ಶಾಲೆಗಳನ್ನ ಅನುದಾನಕ್ಕೆ ಒಳಪಡಿಸಬೇಕು ಸೇರಿದಂತೆ ಇನ್ನೂ ಹಲವಾರು ಬೇಡಿಕೆಗಳನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ಕಾರದ ಮುಂದಿಟ್ಟಿವೆ. ಈ ಕುರಿತು ಖಾಸಗಿ ಶಾಲೆಗಳ ಒಕ್ಕೂಟದವರು ಸಭೆ ನಡೆಸಲಿದ್ದಾರೆ. ಸಭೆಯ ನಂತರ ಅವರ ಮುಂದಿನ ನಡೆ ಏನೆಂಬದು ತಿಳಿಯಲಿದೆ.

Edited By : Nagaraj Tulugeri
PublicNext

PublicNext

20/12/2020 11:03 am

Cinque Terre

69.23 K

Cinque Terre

6