ಬೆಂಗಳೂರು: ಕೇವಲ ಎರಡೂವರೆ ವರ್ಷಕ್ಕೇ ಕೋಲಾರದ ಬಾಲಕನೊಬ್ಬ ತನ್ನ ಅಗಾದ ಸ್ಮರಣಶಕ್ತಿಯಿಂದ ಅಚ್ಚರಿ ಮೂಡಿಸಿ 'ಇಂಡಿಯಾ ಬುಕ್ ಆಫ್ ರೆಕಾರ್ಡ್' ಸೇರಿದ್ದಾನೆ. ಶ್ಲೋಕ, ಹಾಡು, ಗಣಿತದ ಮಗ್ಗಿಗಳನ್ನು ಹರಳು ಹುರಿದಂತೆ ಪಟಪಟ ಹೇಳುತ್ತಾನೆ. ಈ ಮೂಲಕ ಅತಿ ಕಿರಿಯ ವಯಸ್ಸಲ್ಲೇ ಇಂಡಿಯಾ ಬುಕ್ಸ್ ಆಫ್ ರೆಕಾರ್ಡ್ಸ್‌ಗೆ ಸೇರಿದ್ದಾನೆ.
ಕೋಲಾರ ಜಿಲ್ಲೆಯ ಬೆಳ್ಳೂರು ಗ್ರಾಮದ ಮುರಳಿಕೃಷ್ಣ ಮತ್ತು ಶೃತಿ ದಂಪತಿಯ ಪುತ್ರ ವೇದ್ ಸಿದ್ಧಾಂತ್ ರಾಷ್ಟ್ರಗೀತೆಯನ್ನು 52 ಸೆಕೆಂಡ್‌ಗಳಲ್ಲಿಯೇ ಹಾಡಿ ಮುಗಿಸುತ್ತಾನೆ. ಅಷ್ಟೇ ಇದಲ್ಲದೆ ನಾಡಗೀತೆ, 1ರಿಂದ 50ರವರೆಗಿನ ಸಂಖ್ಯೆ, ಭಕ್ತಿಗೀತೆ, ಗಣಿತ ಮಗ್ಗಿ, ದೇಶದ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಹೆಸರು, ಎಲ್ಲ ಭೂಖಂಡಗಳ ಹೆಸರು, ತರಕಾರಿ ಮತ್ತು ಪ್ರಾಣಿಗಳ ಹೆಸರು, ಇಂಗ್ಲಿಷ್ ವರ್ಣಮಾಲೆ. ಕನ್ನಡ ವರ್ಣಮಾಲೆಯನ್ನು ತಡವರಿಸದೇ ಹೇಳುತ್ತಾನೆ.
PublicNext
03/10/2020 03:35 pm