ಮೈಸೂರು: ಅಂಧತ್ವ ಮೆಟ್ಟಿನಿಂತ ವಿದ್ಯಾರ್ಥಿನಿಯೊಬ್ಬರು ಉನ್ನತ ಶಿಕ್ಷಣ ಮುಗಿಸಿದ್ದಷ್ಟೇ ಅಲ್ಲದೆ ಎರಡು ಚಿನ್ನದ ಪದಕ ಪಡೆದು ಸಾಧನೆ ಮಾಡಿದ್ದಾರೆ.
ಕಾವ್ಯ ಎಸ್.ಭಟ್ ಅವರು 2 ವರ್ಷ ವಯಸ್ಸಿನಲ್ಲಿದ್ದಾಗಲೇ ರೆಟಿನೋಬ್ಲಾಸ್ಟೋಮಾ ಎಂಬ ಸಮಸ್ಯೆಯಿಂದಾಗಿ ದೃಷ್ಟಿ ಕಳೆದುಕೊಂಡಿದ್ದರು. ಇತರ ವಿಕಲಾಂಗ ಮಕ್ಕಳಂತೆಯೇ ಅಂಧ ಶಾಲೆಯಲ್ಲಿ ತನ್ನ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಅವರು ಸದ್ಯ ಮೈಸೂರು ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣ ಪೂರೈಸಿದ್ದಾರೆ. ಸೋಮವಾರ ನಡೆದ ಶತಮಾನೋತ್ಸವ ಸಮಾವೇಶದಲ್ಲಿ ಭಾಗವಹಿಸಿದ್ದರು. ರಾಜ್ಯಶಾಸ್ತ್ರದಲ್ಲಿ ಅತಿ ಹೆಚ್ಚಿನ ಅಂಕ ಪಡೆದ ಕಾವ್ಯ ಅವರು ವೇದಿಕೆ ಮೇಲೆ ತೆರಳಿದ ಎರಡು ಚಿನ್ನದ ಪದಕ ನಗದು ಪುರಸ್ಕಾರ ಪಡೆದರು.
ಮೈಸೂರು ವಿವಿಯ ಪಿಜಿ ಕಾರ್ಯಕ್ರಮಕ್ಕೆ ಸೇರಿಕೊಂಡ ಕಾವ್ಯ ಗಣಕೀಕೃತ ಪರೀಕ್ಷೆ ತೆಗೆದುಕೊಳ್ಳಲು ಮುಂದಾದರು. ಆದರೆ ಹಲವು ಸಿಬ್ಬಂದಿ ಕಾವ್ಯ ನಿರ್ಧಾರವನ್ನು ವಿರೋಧಿಸಿದರು. ಆದರೆ ವಿಶ್ವಾಸ ಕಳೆದುಕೊಳ್ಳದ ಕಾವ್ಯ ನಾಲ್ಕು ಸೆಮಿಸ್ಟರ್ ಪರೀಕ್ಷೆಯನ್ನು ಬರೆದಿದ್ದರು.
PublicNext
20/10/2020 11:19 pm