ನಾನು ಗೆದ್ದೆ ಗೆಲ್ಲುವೇ ಎನ್ನುವ ಆತ್ಮಬಲ ನಮ್ಮಲ್ಲಿದ್ರೆ ಯಾವ ಪರೀಕ್ಷೆಯೂ ಕಷ್ಟವಲ್ಲ.
ಅದೇ ರೀತಿ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಲ್ಲಿ (ನೀಟ್) ಹಾವೇರಿಯ ಬೀದಿ ಬದಿಯಲ್ಲಿ ಪಾನ್ ಶಾಪ್ ನಡೆಸುವ ವ್ಯಕ್ತಿಯೊಬ್ಬರ ಮಗಳು 1811 ನೇ ಸ್ಥಾನ ಪಡೆಯುವ ಮೂಲಕ ಪ್ರತಿಷ್ಠಿತ ಮೆಡಿಕಲ್ ಸೀಟ್’ನ್ನು ಸರ್ಕಾರಿ ಸಂಸ್ಥೆಯಲ್ಲಿ ತನ್ನದಾಗಿಸಿಕೊಂಡಿದ್ದಾಳೆ.
ಲಕ್ಷ್ಮಿ ಶಿವಸಾಲಿ ತಂದೆ ಮಂಜು ನಾಥ್ ಬೀದಿ ಬದಿಯಲ್ಲಿ ಸಣ್ಣ ಪಾನ್ ಶಾಪ್ ಒಂದನ್ನು ನಡೆಸುತ್ತಾರೆ.
ಬಡತನದ ಮಧ್ಯೆಯೂ ಮಗಳನ್ನು ಉನ್ನತ ಶಿಕ್ಷಣಕ್ಕಾಗಿ ಕಳಿಸಬೇಕು ಎಂಬ ಕನಸ್ಸು ತಂದೆಯದ್ದು ತಂದೆ ಕನಸ್ಸು ನನಸು ಮಾಡಿದ್ದು ಮಗಳು.
ಕಳೆದ ಸಾರಿ ಲಕ್ಷ್ಮಿ ನೀಟ್ ಪರೀಕ್ಷೆ ಬರೆದಾಗ 55122 ರಾಂಕ್ ಪಡೆದಿದ್ದ ಲಕ್ಷ್ಮಿ ಗೆ ಸರ್ಕಾರಿ ಕೋಟಾದಲ್ಲಿ ಮೆಡಿಕಲ್ ಸೀಟ್ ನ್ನು ಗಿಟ್ಟಿಸಿಕೊಳ್ಳಲು ಆಗಿರಲಿಲ್ಲ.
ಛಲ ಬಿಡದ ಈ ಗಟ್ಟಿಗಿತ್ತಿ ಈ ವರ್ಷ ಮತ್ತೆ ಪರೀಕ್ಷೆ ಬರೆದು ನೀಟ್ ನಲ್ಲಿ 720 ಒಟ್ಟು ಅಂಕಗಳಿಗೆ 643 ಅಂಕ ಪಡೆಯುವ ಮೂಲಕ ಉನ್ನತ ಮಟ್ಟದ ಸಾಧನೆ ಮಾಡಿದ್ದಾಳೆ.
ಲಕ್ಷ್ಮಿ ಪಿಯುಸಿ ಯಲ್ಲಿ 98.56% ಪ್ರತಿಶತ ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಳು.
ಇವಳ ಸಾಧನೆಯ ಹಾದಿ ಸುಲಭವಾಗಲಿ ತಂದೆಯ ಕನಸ್ಸು ನನಸಾಗಲಿ ಎಂಬುದೇ ನಮ್ಮ ಆಶಯ.
PublicNext
18/10/2020 10:50 pm