ದಾವಣಗೆರೆ: ರಾಜ್ಯದಲ್ಲಿ ದ್ವೇಷ ಮತ್ತು ಮತಾಂದತೆಯನ್ನು ಬಿತ್ತುವ ಮದರಸಾ ಶಿಕ್ಷಣವನ್ನು ನಿಷೇಧ ಮಾಡುವಂತೆ ಆಗ್ರಹಿಸಿ ಶ್ರೀರಾಮ ಸೇನೆಯು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದು, ಈ ಕುರಿತು ಚನ್ನಗಿರಿ ತಹಶೀಲ್ದಾರ್ ಮುಖಾಂತರ ಮನವಿ ಸಲ್ಲಿಸಿದೆ.
ಚನ್ನಗಿರಿ ತಹಶೀಲ್ದಾರ್ ಕಚೇರಿಗೆ ತೆರಳಿದ ಶ್ರೀರಾಮ ಸೇನೆಯ ಚನ್ನಗಿರಿ ಘಟಕದ ಪದಾಧಿಕಾರಿಗಳು ಸೇನೆಯ ರಾಜ್ಯ ಸಂಪರ್ಕ ಪ್ರಮುಖ್ ಪರಶುರಾಮ ನಡುಮನಿ ನೇತೃತ್ವದಲ್ಲಿ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಪರಶುರಾಮ್ ನಡುಮನಿ, ರಾಜ್ಯದಲ್ಲಿ ಸಾವಿರಾರು ಮದರಸಾಗಳು ಸರ್ಕಾರದಲ್ಲಿ ಅನುದಾನದಲ್ಲಿ ನಡೆಯುತ್ತಿದೆ. ಇತ್ತಿಚೆಗೆ ಮದರಸಾಗಳಲ್ಲಿ ದೇಶ ವಿರೋಧಿ ಮತ್ತು ರಾಷ್ಟ್ರ ವಿರೋಧಿ ವಿಷಯ, ಬಹುಸಂಖ್ಯಾತ ಹಿಂದೂಳಿದ ವಿರುದ್ಧ ದ್ವೇಷಗಳನ್ನು ಬಿತ್ತಲಾಗುತ್ತಿರುವ ವಿಷಯಗಳು ಗಮನಕ್ಕೆ ಬರುತ್ತಿದೆ. ರಾಷ್ಟ್ರೀಯ ತನಿಖಾ ದಳವು ಪಿಎಫ್‍ಐ ಕಛೇರಿಗಳ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ಮದರಸಾಗಳನ್ನು ಕಾನೂನು ಬಾಹಿರ ಚಟುವಟಿಕೆಗಳಿಗೆ ಉಪಯೋಗ ಮಾಡುತ್ತಿರುವುದು ಗಮನಕ್ಕೆ ಬಂದಿದ್ದು, ಇಲ್ಲಿನ ಶಿಕ್ಷಣವನ್ನು ನಿಷೇಧ ಮಾಡುವಂತೆ ಆಗ್ರಹಿಸಿದರು.
PublicNext
07/10/2022 10:33 pm