ದಾವಣಗೆರೆ : ನಗರದ ಸಾರ್ವಜನಿಕ ವಿಜಯದಶಮಿ ಮಹೋತ್ಸವ ಸಮಿತಿಯಿಂದ 41ನೇ ವರ್ಷದ ಸಾರ್ವಜನಿಕ ವಿಜಯದಶಮಿ ಮಹೋತ್ಸವ ಅಂಗವಾಗಿ ನಗರದಲ್ಲಿ ಬೃಹತ್ ಶೋಭಾಯಾತ್ರೆ ನಡೆಸಲಾಯಿತು.
ನಗರದ ಬೇತೂರು ರಸ್ತೆಯಲ್ಲಿನ ಶ್ರೀ ವೆಂಕಟೇಶ್ವರ ವೃತ್ತದಿಂದ ಬೃಹತ್ ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು. ರಾಣೆಬೆನ್ನೂರು ತಾಲ್ಲೂಕಿನ ಕೋಡಿಯಾಲ ಹೊಸಪೇಟೆ ತಪೋಕ್ಷೇತ್ರ ಪುಣ್ಯಕೋಟಿ ಮಠದ ಶ್ರೀ ಬಾಲಯೋಗಿ ಜಗದೀಶ್ವರ ಸ್ವಾಮೀಜಿ, ಹಿರೇಹಡಗಲಿ ಶ್ರೀ ಹಾಲಸ್ವಾಮೀಜಿ ಮಹಾಸಂಸ್ಥಾನ ಮಠದ ಅಭಿನವ ಹಾಲ ಸ್ವಾಮೀಜಿ ಹಾಗೂ ದಾವಣಗೆರೆ ವಿನೋಬನಗರದ ಜಡೆಸಿದ್ದ ಶಿವಯೋಗೀಶ್ವರ ಮಠದ ಶಿವಾನಂದ ಸ್ವಾಮೀಜಿ ಸಂಸದ ಡಾ.ಜಿ.ಎಂ.ಸಿದ್ದೇಶ್ವರ್ ಸೇರಿದಂತೆ ಅನೇಕ ಮುಖಂಡರು ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು.
ಶೋಭಾಯಾತ್ರೆಯಲ್ಲಿ ಸಾವರ್ಕರ್ ಫ್ಲೆಕ್ಸ್, ಅನೇಕ ಕಲಾ ತಂಡಗಳು, ಸಮಾಳ, ನಂದಿಕೋಲು, ಬೀರಗಾಸೆ, ಕೊಂಬು ಕಹಳೆ ಸೇರಿದಂತೆ ವಿಶೇಷವಾಗಿ ಸಾಂಪ್ರದಾಯಕ ವಾದ್ಯಗಳು, ಸ್ಥಬ್ಧಚಿತ್ರಗಳು, ಕೋಲಾಟ, ನಾಡಿನ ಮಹನೀಯರ ಭಾವಚಿತ್ರವನ್ನು ಕೊಂಡೊಯ್ಯಲಾಯಿತು. ಮೆರವಣಿಗೆಯಲ್ಲಿ ಹತ್ಯೆಯಾದ ಹಿಂದೂ ಕಾರ್ಯಕರ್ತರಾದ ಹರ್ಷ, ಪ್ರವೀಣ್ ನೆಟ್ಟಾರು, ಶಿವು ಉಪ್ಪಾರ, ರುದ್ರೇಶ್, ಪರಮೇಶ್ ಮೆಸ್ತಾ ಸೇರಿ ಹಲವು ಹಿಂದೂ ಕಾರ್ಯಕರ್ತರ ಪೋಟೋ ಮೆರವಣಿಗೆಯಲ್ಲಿ ಕಂಡುಬಂದವು.
PublicNext
05/10/2022 06:08 pm