ದಾವಣಗೆರೆ: ಕುಂದುವಾಡ ಬಳಿ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಾಣ ಮಾಡಲು ಉದ್ದೇಶಿಸಿರುವ ಬಡಾವಣೆಗೆ ಜಮೀನು ನೀಡಲು ರೈತರು ವಿರೋಧ ಮಾಡಿರುವ ವಿಚಾರದ ಬಗ್ಗೆ ವಿವಾದದ ಕಿಡಿ ಹೊತ್ತಿಸಬೇಡಿ. ರೈತರು ಭೂಮಿ ಕೊಡಲ್ಲ, ಧರಣಿ ಕುಳಿತುಕೊಳ್ಳುತ್ತಾರೆ ಎಂಬೆಲ್ಲ ವದಂತಿ ಬೇಡ. ರೈತರ ಜೊತೆ ಮಾತನಾಡಿ ಸಮಸ್ಯೆ ಪರಿಹರಿಸುತ್ತೇವೆ ಎಂದು ಲೋಕಸಭಾ ಸದಸ್ಯ ಜಿಎಂ ಸಿದ್ಧೇಶ್ವರ್ ಹೇಳಿದರು.
ನಗರದ ಕೆ.ಬಿ ಬಡಾವಣೆಯಲ್ಲಿ ಜೈನ ಸಮುದಾಯದ ವತಿಯಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕುಂದುವಾಡ ಬಳಿಯ ಬಡಾವಣೆ ನಿರ್ಮಾಣ ಸಂಬಂಧ ಸರ್ಕಾರದ ಅಧಿಕಾರಿಗಳು, ಶಾಸಕರು ಕ್ರಮ ವಹಿಸುತ್ತಾರೆ. ಈ ಬಗ್ಗೆ ಸಮಾಲೋಚನೆ ನಡೆಸುತ್ತಾರೆ. ಯಾವ ರೈತರು ಭೂಮಿ ಕೊಡಲ್ಲ ಅಂತಾ ವಿರೋಧ ಮಾಡಿಲ್ಲ, ಈ ಬಗ್ಗೆ ಯಾವುದೇ ವಿವಾದ ಸೃಷ್ಟಿಸುವುದು ಬೇಡ ಎಂದರು.
PublicNext
17/09/2022 07:28 pm