ದಾವಣಗೆರೆ: ಕೆರೆ ಹಿನ್ನೀರಿಗೆ ಮುಳುಗಡೆಯಾದ ಅಡಿಕೆ ತೋಟಗಳಿಂದ ರೈತರು ಆತಂಕದಲ್ಲಿ ಕಾಲಕಳೆಯುತ್ತಿದ್ದಾರೆ. ಕಳೆದ ಒಂದು ತಿಂಗಳಿನಿಂದ ನಡು ನೀರಿನಲ್ಲಿ ನಿಂತು ರೈತರು ಅಡಿಕೆ ಕಟಾವು ಮಾಡುತ್ತಿದ್ದಾರೆ. ನೀರು ತೆರವು ಗೊಳಿಸಲು ಸೂಕ್ತ ನಿರ್ಧಾರ ಕೈಗೊಂಡು ಸಂಸದ ಜಿ.ಎಂ.ಸಿದ್ದೇಶ್ವರ ಭರವಸೆ ನೀಡಿದ್ದಾರೆ.
ದಾವಣಗೆರೆ ತಾಲೂಕಿನ ಅಣಜಿ ಕೆರೆ ಹಿನ್ನೀರಿಗೆ ನೂರಾರು ಎಕರೆ ಪ್ರದೇಶದಲ್ಲಿ ಅಡಿಕೆ ತೋಟ ನೀರಿನಲ್ಲಿ ಜಲಾವೃತ ಆಗಿದ್ದರಿಂದ ಅಣಜಿ ಸೇರಿ ಆರು ಗ್ರಾಮಗಳ ವ್ಯಾಪ್ತಿಯ ನೂರಾರು ಎಕರೆ ಅಡಿಕೆ ತೋಟ ನೀರಿನಲ್ಲಿ ಜಲಾಸಮಾಧಿಯಾಗಿದೆ. ಇನ್ನು ಐದು ದಶಕಗಳ ಬಳಿಕ ಭರ್ತಿಯಾಗಿ ಕೋಡಿ ಬಿದ್ದ ಅಣಜಿ ಐತಿಹಾಸಿಕ ಕೆರೆಯಾಗಿದ್ದು, ಹಿನ್ನೀರಿನಲ್ಲಿರುವ ಫಸಲಿಗೆ ಬಂದ ಒಟ್ಟು 300 ಎಕರೆ ಅಡಿಕೆ ತೋಟ ಜಲಾವೃತವಾಗಿದೆ.
ಮಳೆ ನೀರಿನಿಂದ ಅಡಿಕೆ ತೋಟಗಳು ಜಲಾವೃತವಾಗಿದ್ದರಿಂದ ರೈತರು ನಡುಮಟ್ಟದ ನೀರಿನಲ್ಲೇ ನಿಂತು ಅಡಿಕೆ ಕೊಯ್ಲು ಮಾಡ್ತಿರುವ ವಿಡಿಯೋ ಗಳು ವೈರಲ್ ಆಗ್ತಿವೆ. ದಾವಣಗೆರೆ ತಾಲೂಕಿನ ಅಣಜಿ ಗ್ರಾಮದ ಬಳಿಯ ಕೆರೆಯಾಗಲಹಳ್ಳಿಯ ಜಮೀನುಗಳು ಅಣಜಿ ಕೆರೆಯ ಹಿನ್ನೀರಿನಿಂದ ಜಲಾವೃತ ಆಗಿರುವುದರಿಂದ ರೈತರು ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನ ಆಗಿರಲಿಲ್ಲ.
ಯಾವೊಬ್ಬ ಅಧಿಕಾರಿ ಕೂಡ ಇತ್ತಾ ತಲೆ ಹಾಕಿ ಮಲ್ಗಿಲ್ವಂತೆ. ಇದರಿಂದ ರೈತರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಇನ್ನು ಜಿಲ್ಲಾಧಿಕಾರಿ ಶಿವಾನಂದ ಕಪಾಶಿಯವರನ್ನು ಭೇಟಿಯಾಗಲು ಪ್ರಯತ್ನಿಸಿದರು ಕೂಡ ಜಿಲ್ಲಾಧಿಕಾರಿ ಮಾತ್ರ ರೈತರಿಗೆ ಸಿಕ್ಕಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
PublicNext
30/09/2022 08:21 am