ಚನ್ನಗಿರಿ: ಕಂಸಾಗರ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಸ್ವಾಮಿಯ ಅದ್ದೂರಿ ನೂರಾರು ಭಕ್ತರ ಸಮ್ಮುಖದಲ್ಲಿ ಕೆಂಡೋತ್ಸವ ನಡೆಸಲಾಯಿತು.
ಚನ್ನಗಿರಿ ತಾಲೂಕಿನ ಕಂಸಾಗರ ಗ್ರಾಮದ ಶ್ರೀ ವೀರಭದ್ರೇಶ್ವರ ಸ್ವಾಮಿಯ ದೇವಸ್ಥಾನದಲ್ಲಿ ಬೆಳಗ್ಗೆಯಿಂದ ವಿಶೇಷ ಅಭಿಷೇಕ ಮತ್ತು ಪೂಜಾ ಕೈಂಕಾರ್ಯ ನಡೆಸಲಾಯಿತು.ದೇವರ ಹೊತ್ತು ಕೆಂಡ ತುಳಿಯುವವರು ಮೂರು ದಿನಗಳಿಂದ ಉಪವಾಸ ವ್ರತ ಇದ್ದು, ಮಡಿಯಿಂದ ಶ್ರೀ ವೀರಭದ್ರೇಶ್ವರ ದೇವರ ಸ್ಮರಣೆ ಮಾಡುತ್ತಾ ಕೆಂಡ ತುಳಿದರು.
ಒಂದು ವೇಳೆ ವ್ರತ ಮಾಡುವಾಗ ಏನಾದ್ರೂ ತಪ್ಪಿಗಳು ನಡೆದೆ ಅಥವಾ ಸರಿಯಾಗಿ ವ್ರತ ಮಾಡದಿದ್ದಾರೆ. ಕೆಂಡ ತುಳಿಯುವಾಗ ಕಾಲಿನಲ್ಲಿ ಬೊಬ್ಬೆಗಳು ಬರುತ್ತವೆ ಎಂಬ ನಂಬಿಕೆಯೂ ಇದೆ.ಈ ವೇಳೆ ಶ್ರೀ ವೀರಭದ್ರೇಶ್ವರ ಸ್ವಾಮಿಯ ಭಕ್ತರು ಹಾಗೂ ಗ್ರಾಮಸ್ಥರು ಹಾಜರಿದ್ದರು.
Kshetra Samachara
07/10/2022 07:24 pm