ಗದಗ : ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದ 12 ನೇ ವಾರ್ಡಿನ್ ಗಣೇಶ ವಿಸರ್ಜನೆಯೂ ಅದ್ದೂರಿಯಾಗಿ ನಡೆಯಿತು. ಇಂದಿನ ಕಾಲದಲ್ಲಿ ಯುವಕರು ಡಿಜೆ ಸೌಂಡ್ ಗೆ ಮಾರು ಹೋಗಿದ್ದಾರೆ. ಇದರ ಮಧ್ಯೆ ಪುರಸಭೆ ಅಧ್ಯಕ್ಷೆ ಅಶ್ವಿನಿ ಅಂಕಲಕೋಟಿ ಅವರು ಮಹಾರಾಷ್ಟ್ರದಿಂದ ಡೊಳ್ಳು ಬಾರಿಸುವವರನ್ನು ಕರೆಸಿ ಅದ್ದೂರಿಯಾಗಿ ಗಣೇಶ ವಿಸರ್ಜನೆ ಮಾಡುತ್ತಿದ್ದಾರೆ.
ಹೌದು ಲಕ್ಷ್ಮೇಶ್ವರ ಪಟ್ಟಣದ ಪುರಸಭೆ ಅಧ್ಯಕ್ಷೆ ಅಶ್ವಿನಿ ಅಂಕಲಕೋಟಿ ಅವರು ಡಿಜೆ ಸೌಂಡ್ ಬದಲು ಏನಾದರೂ ಹೊಸ ಪ್ರಯತ್ನ ಮಾಡಬೇಕೆಂದು ಮಹಾರಾಷ್ಟ್ರದಿಂದ ಡೊಳ್ಳು ಬಾರಿಸುವವರನ್ನು ಕರೆಸಿ ಅದ್ದೂರಿಯಾಗಿ ಮೆರವಣಿಗೆ ಮಾಡಿದ್ದಾರೆ.
ವಿವಿಧ ರೀತಿಯಲ್ಲಿ ಡೊಳ್ಳು ಬಾರಿಸಿದನ್ನು ನೋಡಿದ ಲಕ್ಷ್ಮೇಶ್ವರ ಪಟ್ಟಣದ ಜನ ಖುಷಿ ಪಟ್ಟಿದ್ದಾರೆ.
PublicNext
08/09/2022 06:25 pm