ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಸ್ಯರಾಶಿ, ಜೀವಿಗಳ ಸಂರಕ್ಷಣೆ ಮಂಡಳಿಯ ಮುಖ್ಯ ಉದ್ದೇಶ: ಎನ್.ಎಂ.ರವಿ ಕಾಳಪ್ಪ

ಗದಗ: ಭೂಮಿಯಲ್ಲಿನ ಸಣ್ಣ ಸೂಕ್ಷ್ಮಾಣು ಜೀವಿಗಳಿಂದ ಹಿಡಿದು ದೊಡ್ಡ ಜೀವಿಗಳು, ಅಳವಿನಂಚಿನಲ್ಲಿರುವ ಸಸ್ಯರಾಶಿ, ಜೀವಿಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವದು ರಾಜ್ಯ ಜೀವ ವೈವಿದ್ಯ ಮಂಡಳಿಯ ಮುಖ್ಯ ಉದ್ದೇಶವಾಗಿದೆ ಎಂದು ಜೀವ ವೈವಿದ್ಯಮಯ ಮಂಡಳಿ ಅಧ್ಯಕ್ಷ ಎನ್.ಎಂ.ರವಿ ಕಾಳಪ್ಪ ಹೇಳಿದರು.

ನಗರದ ಡಿ.ಜಿ.ಎಂ. ಆಯುರ್ವೇದಿಕ ಮಹಾವಿದ್ಯಾಲಯದಲ್ಲಿ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಜೀವ ವೈವಿದ್ಯಮಯ ಮಂಡಳಿಯು 2002 ರಲ್ಲಿ ದೇಶದಲ್ಲಿ ಕಾನೂನಿನಡಿ ಅಳವಡಿಸಿ 2003 ರಿಂದ ಕಾರ್ಯ ರೂಪಕ್ಕೆ ತರಲಾಯಿತು ಎಂದರು.

ಭೂಮಿ ಮೇಲಿನ ಅಳವಿನಂಚಿನಲ್ಲಿರುವ ಜೀವರಾಶಿಗಳ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಪ್ರತಿ ಗ್ರಾಮ ಪಂಚಾಯತ ಮಟ್ಟದಿಂದ ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲೂ ಸಮಿತಿಗಳನ್ನು ರಚಿಸಲಾಗಿದ್ದು ಗ್ರಾಮ ಪಂಚಾಯತ ಮಟ್ಟದಲ್ಲಿ ಈ ಕುರಿತು ಜಾಗೃತಿ ಮೂಡಿಸುವ ಕಾರ್ಯವಾಗಬೇಕಾಗಿದೆ ಎಂದರು.

ಗದಗ ಜಿಲ್ಲೆಯ ಮಣ್ಣು, ಗಾಳಿಯಲ್ಲಿಯೂ ಕೂಡ ಔಷಧಿಯ ಗುಣಗಳನ್ನು ಹೊಂದಿದೆ. ಇಲ್ಲಿನ ಕಪ್ಪತಗುಡ್ಡದಲ್ಲಿ ಸುಮಾರು 600 ಕ್ಕೂ ಹೆಚ್ಚಿನ ಔಷಧಿ ಗಿಡಮರಗಳಿದ್ದು ಈ ಕುರಿತು ಹೆಚ್ಚಿನ ಅಧ್ಯಯನ ನಡೆಸಿ ಅವುಗಳ ಸಂರಕ್ಷಣೆಯ ಜೊತೆಗೆ ಇವುಗಳಿಂದಾಗುವ ಪ್ರಯೋಜನೆ, ಬಳಕೆ ಕುರಿತು ಸಾರ್ವಜನಿಕರಲ್ಲಿ ತಿಳುವಳಿಕೆ ನೀಡುವ ಕಾರ್ಯ ಕೈಗೊಳ್ಳಲಾಗುವದು ಎಂದರು.

ಪತ್ರಿಕಾ ಗೋಷ್ಠಿಯಲ್ಲಿ ರಾಜ್ಯ ಜೀವ ವೈವಿದ್ಯಮಯ ಮಂಡಳಿಯ ತಾಂತ್ರಿಕ ಕಾರ್ಯನಿರ್ವಾಹಕ ಪ್ರಸನ್ನ, ಡಿ.ಜಿ.ಎಂ. ಕಾಲೇಜಿನ ಪ್ರಾಚಾರ್ಯಾ ಡಾ.ಉಮೇಶ ಪುರದ, ಕಾರ್ಯದರ್ಶಿ ಡಾ.ಜಿ.ಬಿ.ಪಾಟೀಲ ಹಾಜರಿದ್ದರು.

Edited By : Nagesh Gaonkar
PublicNext

PublicNext

25/08/2022 05:12 pm

Cinque Terre

35.8 K

Cinque Terre

0