ಶಿಗ್ಗಾಂವ: ಇಂದು 75 ನೇ ಸ್ವಾತಂತ್ರ್ಯ ಅಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ, ಶಿಗ್ಗಾಂವ ತಾಲ್ಲೂಕಿನ ಅಡವಿಸೋಮಾಪುರ ಸರ್ಕಾರಿ ಶಾಲೆಯಲ್ಲಿ ಶಾಲೆಯ ಅಧ್ಯಕ್ಷರಾದ ಉದಯಕುಮಾರ್ ವಾಲಿಕಾರ ಅವರು, ಧ್ವಜಾರೋಹಣ ಮಾಡಿ ಸ್ವಾತಂತ್ರ್ಯೋತ್ಸವ ಆಚರಣೆ ಮಾಡಿದರು.
ಈ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರು, ಊರಿನ ಗುರು ಹಿರಿಯರು ಭಾಗವಹಿಸಿದ್ದರು. ಇನ್ನು ಈ ಸ್ವಾತಂತ್ರ್ಯ ದಿನಾಚರಣೆದೆಂದು ಶಾಲಾ ಮಕ್ಕಳು ದೇಶಭಕ್ತಿ ಗೀತೆಗಳಿಗೆ ನೃತ್ಯ ಮಾಡಿದರು. ಹಲವಾರು ಮಕ್ಕಳು ದೇಶಕ್ಕಾಗಿ ಹೋರಾಡಿದ ಮಹನೀಯರ ವೇಷಭೂಷಣ ಧರಿಸಿ ಅದ್ಧೂರಿಯಾಗಿ ಆಚರಣೆ ಮಾಡಿದರು.
PublicNext
15/08/2022 08:50 pm