ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ: ಲಿಮ್ಕಾ ದಾಖಲೆ ಸೇರಲಿರುವ ದೇಶದ ಅತೀ ದೊಡ್ಡ ಬಾವುಟ

ಕೋಲಾರ: ಕೋಲಾರದಲ್ಲಿ ಅದ್ಧೂರಿ ಸ್ವಾತಂತ್ರ್ಯ ಅಮೃತ ಮಹೋತ್ಸವ ದಿನಾಚರಣೆ ನಡೆದಿದ್ದು, ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಬೃಹತ್ ಬಾವುಟ ಪ್ರದರ್ಶನ ಲಿಮ್ಕಾ ದಾಖಲೆ ಸೇರ್ಪಡೆಯಾಗಲಿದೆ. 204 ಅಡಿ ಎತ್ತರ ,630 ಅಡಿ ಅಗಲ ವಿಸ್ತೀರ್ಣದ ಧ್ವಜ ಇದಾಗಿದ್ದು, 3600 ಅಡಿ ಅಗಲದ ಅಶೋಕ ಚಕ್ರವಿದೆ. 1.30 ಲಕ್ಷ ಚದರ ಅಡಿ ವಿಸ್ತೀರ್ಣದ ಈ ಬಾವುಟಕ್ಕಾಗಿ ಬರೋಬ್ಬರಿ 13,000 ಮೀಟರ್‌ನಲ್ಲಿ ಬಟ್ಟೆಯನ್ನು ಬಳಸಿಕೊಳ್ಳಲಾಗಿದೆ. ಸಂಸದ ಮುನಿಸ್ವಾಮಿ ನೇತೃತ್ವದಲ್ಲಿ ಬಾವುಟ ತಯಾರ ಆಗಿದ್ದು, ಪ್ರದರ್ಶನ ಆಗುತ್ತಿದಂತೆ ರಕ್ಷಣಾ ಇಲಾಖೆ ವಿಮಾನದಿಂದ ಹೂ ಮಳೆ ಸುರಿಸಲಾಯ್ತು. ಈ ಮನೋಹರವಾದ ದೃಶ್ಯವನ್ನು ಕಣ್ತುಂಬಿಕೊಳ್ಳಲು ಕಿಕ್ಕಿರಿದು ಜನರು ಸೇರಿದ್ದಾರೆ.

ವರದಿ : ರವಿ ಕುಮಾರ್ ,ಕೋಲಾರ

Edited By : Manjunath H D
PublicNext

PublicNext

15/08/2022 03:01 pm

Cinque Terre

95.66 K

Cinque Terre

7