ವರದಿ: ಸಂತೋಷ ಬಡಕಂಬಿ.
ಅಥಣಿ : ಕಾಗವಾಡ ತಾಲೂಕಿನ ಉಗಾರ ಖುರ್ದ್ ಪಟ್ಟಣದ ಉಗಾರ ಶುಗರ್ ವರ್ಕ್ಸ್ ಸಕ್ಕರೆ ಕಾರ್ಖಾನೆಯ ಡಾ. ಶಿರಗಾಂವ್ಕರ ಶಿಕ್ಷಣ ಸಂಸ್ಥೆಯ ಎನ್.ಸಿ.ಸಿ ಮತ್ತು ಶ್ರೀಹರಿ ಪ್ರೌಢಶಾಲೆಯ 75 ವಿದ್ಯಾರ್ಥಿಗಳಿಗೆ ಆಜಾದಿ ಕಾ ಅಮೃತ ಮಹೋತ್ಸವ ನಿಮಿತ್ತ ಶಿಕ್ಷಣ ಸಂಸ್ಥೆ ವತಿಯಿಂದ ಬೆಳಗಾವಿಯಿಂದ ಪುಣೆವರೆಗೆ ವಿಮಾನ ಪ್ರವಾಸದ ಭಾಗ್ಯ ಲಭಿಸಿದೆ.
ಉಗಾರದ ಡಾ. ಶಿರಗಾಂವ್ಕರ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಚಂದನ ಶಿರಗಾಂವ್ಕರ್ ಹಾಗೂ ಅವರ ತಾಯಿ ರಾಧಿಕಾ ಶಿರಗಾಂವ್ಕರ್ ಅವರು ಶ್ರೀಹರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಉಗಾರದಿಂದ ಬೆಳಗಾವಿಗೆ ತೆರಳುವ ಬಸ್ ಗೆ ಪೂಜೆ ಸಲ್ಲಿಸಿ ಬೀಳ್ಕೊಟ್ಟು ಶುಭ ಹಾರೈಸಿದರು.
ಈ ವೇಳೆ ಚಂದನ್ ಶಿರಗಾಂವ್ಕರ್ ಮಾತನಾಡಿ 75ನೇ ಸ್ವಾತಂತ್ರ್ಯ ಮಹೋತ್ಸವ ನಿಮಿತ್ತ 75 ವಿದ್ಯಾರ್ಥಿಗಳಿಗೆ ಬೆಳಗಾವಿ ಸುವರ್ಣ ವಿಧಾನಸೌಧ ವೀಕ್ಷಣೆ, ಬೆಳಗಾವಿಯಿಂದ ಪುಣೆವರೆಗೆ ವಿಮಾನ ಪ್ರವಾಸದ ಅವಕಾಶ ಕಲ್ಪಿಸಲಾಗಿದೆ ಎಂದರು.
ಅನಂತರ ರಾಧಿಕಾರ ಶಿರಗಾಂವ್ಕರ್ ಮಾತನಾಡಿದರು, ಶಾಲೆಯ ಮುಖ್ಯಾಧ್ಯಾಪಕಿ ದೀಪ್ತಿ ಭೋಸಲೆ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಗೆ ಹಾಗೂ ಪಾಲಕರಿಗೆ ಧನ್ಯವಾದ ತಿಳಿಸಿದರು.
PublicNext
09/08/2022 10:34 pm