ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊರಟಗೆರೆ: ವರಮಹಾಲಕ್ಷ್ಮಿ ಹಬ್ಬಕ್ಕೆ ಗೊರವನ ಹಳ್ಳಿಗೆ ಹರಿದುಬಂದ ಭಕ್ತರ ದಂಡು

ಕೊರಟಗೆರೆ: ದೇಶದಲ್ಲಿ ಸೊಲ್ಲಾಪುರ ಲಕ್ಷ್ಮಿಯನ್ನು ಹೊರತು ಪಡಿಸಿದರೆ ದೇಶದಲ್ಲಿಯೇ ಅತ್ಯಂತ ಹೆಸರು ವಾಸಿಯಾಸಿಯಾಗಿರುವ ಲಕ್ಷ್ಮಿ ದೇವಾಲಯ ಎಂದರೆ ಕೊರಟಗೆರೆ ತಾಲ್ಲೂಕಿನ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿ ದೇವಾಲಯ. ಇಲ್ಲಿ ಹಲವು ಐತಿಹ್ಯಗಳಿದ್ದು ಶುಕ್ರವಾರ ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ವಿಶೇಷ ಪೂಜೆಗಳು ನಡೆಯುವ ಹಿನ್ನೆಲೆಯಲ್ಲಿ ರಾಜ್ಯದ ಮತ್ತು ನೆರೆರಾಜ್ಯದ ಸಾವಿರಾರು ಭಕ್ತರು ಇಂದು ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ನಂಬಿದ ಭಕ್ತರಿಗೆ ದೇವಿಯು ದಾರಿದ್ರ್ಯವನ್ನು ತೊಲಗಿಸಿ ಸಕಲ ಸಂಪತ್ತನ್ನು ಕರುಣಿಸುತ್ತಾಳೆ ಎನ್ನುವ ಐತಿತ್ಯವಿದ್ದು ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಕ್ಷೇತ್ರಕ್ಕೆ ಬರುತ್ತಾರೆ.

ದೇವಿಗೆ ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ವಿಶೇಷ ಹೂವಿನ ಅಲಂಕಾರ, ದೀಪಾಲಂಕಾರ, ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿವೆ. ಬೆಳಿಗ್ಗೆ 6 ಗಂಟೆಯಿಂದ ಅವರ ಬಾಗಿಲು ಪೂಜೆ ರಾತ್ರಿ 8 ಘಂಟೆಯವರೆಗೆ ನಡೆಲಿವೆ.

5 ದಶಕಗಳ ಕಾಲ ದೇವಾಲಯದ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿದ್ದ ಹೆಚ್.ಪಿ ಪ್ರಸನ್ನಕುಮಾರ್ ಜುಲೈ. 23 ರಂದು ಅನಾರೋಗ್ಯದಿಂದ ಮೃತಪಟ್ಟಿದ್ದು ಆಗಸ್ಟ್ -4 ರಂದು ಅವರ ವೈಕುಂಠ ಸಮಾರಾಧನೆ ನಡೆದಿದೆ. ಪ್ರತೀ ವರಮಹಾಲಕ್ಷ್ಮಿ ಹಬ್ಬಕ್ಕೆ ಪ್ರಸನ್ನಕುಮಾರ್ ದೇವಿಗೆ ಪ್ರಥಮ ಪೂಜೆ ಮಾಡುತ್ತಿದ್ದು ಈ ಬಾರಿ ಅವರ ಅನುಪಸ್ಥಿತಿಯಲ್ಲಿ ಅವರ ಮಗ ಸುಭ್ರಮಣ್ಯ ಶರ್ಮ ಪೂಜೆಯನ್ನು ಮಾಡಿದರು.

ಗೊರವನಹಳ್ಳಿ ಮಹಾಲಕ್ಷ್ಮಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಭಕ್ತರಿಗೆ ವಿಶೇಷ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿತ್ತು. ರಣ ಮಳೆಯ ನಡುವೆಯೂ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನವನ್ನು ಪಡೆದರು.

ವರದಿ: ರಾಘವೇಂದ್ರ ದಾಸರಹಳ್ಳಿ, ಪಬ್ಲಿಕ್ ನೆಕ್ಸ್ಟ್

Edited By : Nagesh Gaonkar
PublicNext

PublicNext

05/08/2022 06:47 pm

Cinque Terre

23.49 K

Cinque Terre

2