ವರದಿ: ಗೀತಾಂಜಲಿ
ಕಲಬುರ್ಗಿ: ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ಇಂದು ಕಲಬುರ್ಗಿ ಜಿಲ್ಲೆಯ ಜೇವರ್ಗಿಯಲ್ಲಿ 100 ಮೀಟರ್ ಉದ್ದನೆಯ ಬೃಹತ್ ಗಾತ್ರದ ರಾಷ್ಟಧ್ವಜವನ್ನು ಪ್ರದರ್ಶಿಸಿದ್ದು ಎಲ್ಲರ ಗಮನ ಸೆಳೆಯಿತು.
ಜೈ ಭಾರತ್ ಮಾತಾ ಸೇವಾ ಸಮಿತಿ ಸಂಸ್ಥಾಪಕ, ರಾಷ್ಟ್ರೀಯ ಅಧ್ಯಕ್ಷ ಶ್ರೀಹವಾ ಮಲ್ಲಿನಾಥ ಮಹಾರಾಜ ಸಿರಗುಡಿ ಅವರ ನೇತೃತ್ವದಲ್ಲಿ ಸಾಗಿದ ರಾಷ್ಟ್ರಧ್ವಜದ ಮೆರವಣಿಗೆಯಲ್ಲಿ ಅಸಂಖ್ಯಾತ ಸ್ಥಳೀಯರು, ಶಾಲಾ -ಕಾಲೇಜು ವಿದ್ಯಾರ್ಥಿಗಳು, ರಾಜಕೀಯ ಮುಖಂಡರು ಭಾಗಿಯಾಗಿದ್ದರು.
ರಾಷ್ಟ್ರಧ್ವಜವನ್ನು ಎತ್ತಿ ಹಿಡಿದು ಜೇವರ್ಗಿಯ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಯಿತು.
PublicNext
26/07/2022 08:26 pm