ಶಿಗ್ಗಾಂವ: ನಮ್ಮ ಶಾಲೆ..ನಮ್ಮ ಗುರು..ನಮ್ಮ ಹೆಮ್ಮೆ. ಹೌದು. ಶಾಲೆ ಅನ್ನೋದೇ ಒಂದು ಹೆಮ್ಮೆ. ಇಲ್ಲಿ ಕಲಿತ ವಿದ್ಯ ಇಡೀ ಜೀವನಕ್ಕೆ ಆಗುತ್ತದೆ. ಇಂತಹ ಶಾಲೆಯ ಗುರುಗಳ ಬಗ್ಗೆ ನಮಗೆ ವಿಶೇಷ ಗೌರವ ಇರುತ್ತದೆ. ಇದೇ ಶಾಲೆಗೆ ಕಾಲಿಟ್ಟಾಗ ಆ ಹಳೆ ನೆನಪುಗಳು ಮತ್ತೆ ಮತ್ತೆ ನೆನಪಿಗೆ ಬರುತ್ತವೆ. ನಿಜ, ಈ ಎಲ್ಲ ಅನುಭವಗಳ ಅಲೆಯಲ್ಲಿ ತೇಲಿದರು ಶಿಗ್ಗಾವ ತಾಲ್ಲೂಕಿನ ಕುನ್ನೂರು ಸರ್ಕಾರಿ ಶಾಲೆಯ ಆ ಹಳೆ ವಿದ್ಯಾರ್ಥಿಗಳು
ಹೌದು, ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ | ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ ಎಂಬ ಸ್ಲೋಕದಂತೆ ಕಲಿಸಿದ ಗುರುಗಳನ್ನು ಜೀವನದಲ್ಲಿ ಮೆರೆಯಲು ಸಾಧ್ಯವಿಲ್ಲ. ಅದೇ ರೀತಿ ಶಿಗ್ಗಾಂವ ತಾಲ್ಲೂಕಿನ ಕುನ್ನೂರು ಸರ್ಕಾರಿ ಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳು ಗುರುವಂದನಾ ಕಾರ್ಯಕ್ರಮ ಹಾಗೂ 20 ವರ್ಷಗಳಿಂದ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಸಿ.ಎಸ್ ಪಾಟೀಲ್ ಗುರುಗಳಿಗೆ ಬಿಳ್ಕೊಡುಗೆ ಕಾರ್ಯಕ್ರಮ ಕೂಡ ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮಲ್ಲಿ 1994 ರಿಂದ 2022 ವರ್ಷದ ನೂರಾರು ಹಳೆ ವಿದ್ಯಾರ್ಥಿಗಳು ಭಾಗಿಯಾಗಿದ್ದು ಸಂತಸದ ವಿಷಯ.
ಅಷ್ಟೇ ಅಲ್ಲದೆ ಹಿರಿಯ ಗುರುಗಳನ್ನು ಉದ್ದೇಶಸಿ ಹಳೆ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಕಾರ್ಯಕ್ರಮಕ್ಕೆ ಬಂದಂತಹ ಎಲ್ಲ ಗುರುಗಳಿಗೆ ಸನ್ಮಾನ ಮಾಡಲಾಯಿತು. ಅಡವಿಸೋಮಾಪುರ , ಕುನ್ನೂರ, ಹೊಸುರ, ಸೇರಿದಂತೆ ಈ ಶಾಲೆಯಲ್ಲಿ ಕಲಿತ ಹಳೆ ವಿದ್ಯಾರ್ಥಿಗಳು ಎಲ್ಲ ಗುರುಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಈ ಶಾಲೆಯಲ್ಲಿ ಕಲಿಸಿದಂತಹ ಎಲ್ಲ ಶಿಕ್ಷಕರನ್ನು ಕರೆಯಿಸಿ ಗುರುವಂದನಾ ಮಾಡಲಾಯಿತು. ವಿದ್ಯಾರ್ಥಿಗಳು ಶಿಕ್ಷಕರ ಜೊತೆ ಸೆಲ್ಫಿ ತೆಗೆದುಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.
PublicNext
26/06/2022 09:27 pm