ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೇ. 7, 8 ರಂದು ಕಟಕೋಳ ಬನಶಂಕರಿ ದೇವಿ ಜಾತ್ರೆ

ರಾಮದುರ್ಗ(ಕಟಕೋಳ): ತಾಲೂಕಿನ ಕಟಕೋಳ ಗ್ರಾಮದ ನೇಕಾರ ಪೇಟೆಯ ಬನಶಂಕರಿದೇವಿ ಜಾತ್ರಾ ಮಹೋತ್ಸವ, ನವಗ್ರಹ ಮೂರ್ತಿಗಳ, ಭರಮದೇವರ, ನಾಗದೇವರ ಮೂರ್ತಿ ಪ್ರತಿಷ್ಠಾಪನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮೇ 7 ಮತ್ತು 8ರಂದು ನಡೆಯಲಿದೆ.

ಮೇ 7ರಂದು ಸಂಜೆ 6 ಕ್ಕೆ ನವಗ್ರಹ ಮೂರ್ತಿಗಳ ಮೆರವಣಿಗೆ ಕರವೀರಮ್ಮದೇವಿ ದೇವಸ್ಥಾನದಿಂದ ಬನಶಂಕರಿದೇವಿ ದೇವಸ್ಥಾನದವರೆಗೆ ನಡೆಯಲಿದೆ. ನಂತರ ರಾತ್ರಿ 8 ಕ್ಕೆ ನವಗ್ರಹ ಮೂರ್ತಿಗಳ ಪೂಜಾಕಾರ್ಯಕ್ರಮ ನಡೆಯಲಿದೆ. ಮೇ.8ರಂದು ಪ್ರಾತಃ ಕಾಲ 5 ಗಂಟೆಗೆ ವಿವಿಧ ಪೂಜಾ ಕಾರ್ಯಕ್ರಮ ಹಾಗೂ ನವಗ್ರಹಗಳ ಹಾಗೂ ಭರಮದೇವರ, ನಾಗದೇವರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 10 ಗಂಟೆಗೆ ಸಮಾಜದ ಮುತ್ತೈದೆಯರಿಂದ ಆರತಿ ಸೇವೆ ಮತ್ತು ಮೆರವಣಿಗೆ ನಡೆಯಲಿದೆ. ಮಧ್ಯಾಹ್ನ1.30 ಕ್ಕೆ ಮಹಾಪ್ರಸಾದ ಇರಲಿದೆ.

ಕೊಣ್ಣೂರು ಜೈ ಕಿಸಾನ್ ಸಾಂಸ್ಕೃತಿಕ ಮತ್ತು ಜಾನಪದ ಕಲಾ ತಂಡದಿಂದ ಜಾನಪದ ಕಾರ್ಯಕ್ರಮ ನಡೆಯಲಿದೆ ಎಂದು ಬನಶಂಕರಿದೇವಿ ದೇವಸ್ಥಾನ ಟ್ರಸ್ಟ್ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ.

Edited By : Nirmala Aralikatti
PublicNext

PublicNext

03/05/2022 10:23 pm

Cinque Terre

18.05 K

Cinque Terre

0