ಶಿರಹಟ್ಟಿ: ಕನ್ನಡ ನಾಡಿನಲ್ಲಿ ಹಿಜಾಹ್ ವರ್ಸಸ್ ಕೇಸರಿ ಶಾಲ್ ಗದ್ದಲ ಆಯಿತು. ಹಲಾಲ್ ಕಟ್ ಮತ್ತು ಜಟ್ಕಾ ಕಟ್ ಗುದ್ದಾಟನೂ ನಡೆಯಿತು. ಇದರ ಮಧ್ಯ ಶಿರಹಟ್ಟಿಯ ಮುಸ್ಲಿಂ ಫ್ಯಾಮಿಲಿ ಕೊಂಚ ವಿಭಿನ್ನವಾಗಿಯೇ ಕಾಣಿಸುತ್ತದೆ. ಜಾತಿ ಮುಸ್ಲಿ ಆದರೂ ಕೂಡ ಹಿಂದೂ ದೇವರ ಆರಾಧನೆ, ಹಿಂದೂ ದೇವಸ್ಥಾನಕ್ಕೆ ಹೋಗೋದು ಇವೆಲ್ಲವನ್ನೂ ಮಾಡುತ್ತದೆ ಈ ಫ್ಯಾಮಿಲಿ. ಹೌದು ಈ ವಿಭಿನ್ನ ಫ್ಯಾಮಿಲಿ ಹೆಸರು ಯಾದಗಿರಿ. ಈ ಕುಟುಂಬದ ಸದಸ್ಯನ ಹೆಸರು ಅಕ್ಬರ್ ಸಾಬ್. ಈ ಫ್ಯಾಮಿಲಿಯಿಂದ ಈ ವರ್ಷ ಅಂಬೇಡ್ಕರ್ ಜಯಂತಿ ಆಚರಿಸಲಾಗಿದೆ. ಬುದ್ದ,ಬಸವಣ್ಣ, ಅಂಬೇಡ್ಕರ್ ಇರೋ ಫೋಟೋಗೆ ಹೂವಿನ ಮಾಲೆ ಹಾಕಿ ಮನೆಯಲ್ಲಿಯೇ ಪೂಜೆ ಸಲ್ಲಿಸಿದ್ದಾರೆ. ಅಂಬೇಡ್ಕರ್ ಜಯಂತಿಯನ್ನೂ ಆಚರಿಸಿದ್ದಾರೆ. ಈ ಮೂಲಕ ನಾವೆಲ್ಲ ಒಂದೇ ಎಂದು ಸಾರಿ,ಸಾರಿ ಹೇಳ್ತಿದೆ ಈ ಫ್ಯಾಮಿಲಿ..
PublicNext
15/04/2022 12:27 pm