ಚಿತ್ರದುರ್ಗ : ಬಾಬ ಸಾಹೇಬ್ ಅಂಬೇಡ್ಕರ್ ರ 131 ನೇ ಜಯಂತಿಯನ್ನ ಚಿತ್ರದುರ್ಗದ ನಿರಾಶ್ರಿತರ ಕೇಂದ್ರದಲ್ಲಿ ಭಕ್ತಿ ಮತ್ತು ಶಿಸ್ತಿನಿಂದ ಆಚರಿಸಲಾಯಿತು.
ಭಿಕ್ಷಾಟನೆಯಲ್ಲಿ ತೊಡಿದ್ದವರಿಗಾಗಿ ಪುನರ್ವಸತಿ ಕೇಂದ್ರವಾಗಿರುವ ಚಿತ್ರದುರ್ಗ ನಿರಾಶ್ರಿತರ ಕೇಂದ್ರದಲ್ಲಿ ಸುಮಾರು 300ಕ್ಕೂ ಹೆಚ್ಚು ನಿರಾಶ್ರಿತರಿದ್ದಾರೆ.
ಇಂದು ಅಂಬೇಡ್ಕರ್ ಫೋಟೋ ಗೆ ಪೂಜೆ ಸಲ್ಲಿಸಿದ ಇಲ್ಲಿನ ಅಧಿಕಾರಿ ಮಹದೇವಯ್ಯ ಭಿಕ್ಷುಕರಿಗೆ ಅಂಬೇಡ್ಕರ್ ಬಗೆಗಿನ ವಿಚಾರ ತಿಳಿಸಿದರು. ಸದಾ ಭಿಕ್ಷಾಟನೆ ಯಲ್ಲಿ ತೊಡಗಿದ್ದವರಿಗೂ ಒಂದು ಸೂರು ಕಲ್ಪಿಸಿ ಅವರಿಗೆ ತಮ್ಮ ಹಕ್ಕು ಸಿಗಬೇಕು ಎಂದು ಆಶಿಸಿದ ಅಂಬೇಡ್ಕರ್ ಗೆ ಜೈಕಾರ ಹಾಕುವ ಮೂಲಕ ಅಂಬೇಡ್ಕರ್ ಸ್ಮರಣೆ ಮಾಡಿದ್ರು.
ಈ ಸಂದರ್ಭದಲ್ಲಿ ನಿರಾಶ್ರಿತರು ಕೂಡ ಶಿಸ್ತಿನಿಂದ ಸಾಲಾಗಿ ನಿಂತು ಅಂಬೇಡ್ಕರ್ ಜಯಂತಿಯಲ್ಲಿ ತೊಡಗಿದ್ದು ವಿಶೇಷವಾಗಿತ್ತು.
PublicNext
14/04/2022 11:22 am