ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಅಂತಾರಾಷ್ಟ್ರೀಯ ಕಲಾವಿದ ರವಿ ಕಟಪಾಡಿಗೆ ರೈಲ್ವೆ ADGP ಭಾಸ್ಕರ್‌ರಾವ್ ಸನ್ಮಾನ

ವರದಿ : ಮಲ್ಲಿಕ್ ಬೆಳಗಲಿ

ಬೆಂಗಳೂರು: ಐಪಿಎಸ್ ಅಧಿಕಾರಿ ರೈಲ್ವೆ ADGP ಭಾಸ್ಕರ್ ರಾವ್ ಅವರಿಂದ ಉಡುಪಿ ಜಿಲ್ಲೆಯ ಕಟಪಾಡಿ ನಿವಾಸಿ ಆಗಿರುವ ರವಿ ಅವರಿಗೆ ತಮ್ಮ ಕಚೇರಿಯಲ್ಲಿ ಸನ್ಮಾನ ಮಾಡಿ ಅವರ ಕಾರ್ಯವನ್ನು ಶ್ಲಾಘಿಸಿದ್ದಾರೆ. ರವಿ ಕಟಪಾಡಿ ಕಳೆದ ಆರು ವರ್ಷಗಳಿಂದ ಅಷ್ಟಮಿ ಮತ್ತು ವಿಟ್ಲಪಿಂಡಿ ದಿನದಂದು ವೇಷ ಧರಿಸುತ್ತಾರೆ. ಊರೂರು ತಿರುಗಿ ಲಕ್ಷಾಂತರ ದೇಣಿಗೆ ಸಂಗ್ರಹಿಸಿದ್ದಾರೆ. ನಿಮಗೆ ನೆನಪಿರಲಿ, ಇವರೊಬ್ಬ ಸಾಮಾನ್ಯ ಕೂಲಿ ಕಾರ್ಮಿಕ. ಕಳೆದ ಏಳು ವರ್ಷಗಳಿಂದ ವಿವಿಧ ವೇಷ ಹಾಕಿ ಸುಮಾರು 72 ಲಕ್ಷ ರೂಪಾಯಿ ಸಂಗ್ರಹಿಸಿದ ಎಲ್ಲ ಹಣವನ್ನು ಬಡ ಅನಾರೋಗ್ಯ ಪೀಡಿತ 33 ಮಕ್ಕಳಿಗೆ ವಿತರಿಸಿ ಮಾನವೀಯತೆ ಮೆರೆದಿದ್ದಾರೆ

Edited By : Manjunath H D
PublicNext

PublicNext

14/11/2021 10:55 am

Cinque Terre

29.67 K

Cinque Terre

0