ವರದಿ: ಮೌನೇಶ ಬಿ. ಮಂಗಿಹಾಳ, ಪಬ್ಲಿಕ್ ನೆಕ್ಸ್ಟ್ ಯಾದಗಿರಿ
ಯಾದಗಿರಿ: ನಗರದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹೆಣ್ಣು ಮಕ್ಕಳ ಸ್ವರಕ್ಷಣೆಗಾಗಿ ಯಾದಗಿರಿ ಜಿಲ್ಲಾ ಪೊಲೀಸ್ ವತಿಯಿಂದ ಕರಾಟೆ ತರಬೇತಿ ಕಾರ್ಯಾಗಾರ ಹಮ್ಮಿಕೊಂಡು ಕಾಲೇಜು ಮತ್ತು ಹೈಸ್ಕೂಲಿನಲ್ಲಿ ಓದುತ್ತಿರುವ ಎಲ್ಲಾ ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿಯನ್ನು ನೀಡಲಾಯಿತು.
ಅಲ್ಲದೇ ಕಾನೂನಿನ ಅರಿವು ಮೂಡಿಸುವ ಪ್ರಯುಕ್ತ ಜಾಗೃತಿ ಕಾರ್ಯಕ್ರಮ ಕೂಡಾ ಹಮ್ಮಿಕೊಂಡಿದ್ದು, ಯಾದಗಿರಿ ಎಸ್ಪಿ ಡಾ. ಸಿಬಿ ವೇದಮೂರ್ತಿ ಅವರು, ಗೃಹ ಸುರಕ್ಷಾ ಆ್ಯಪ್ ಬಳಸುವ ಬಗ್ಗೆ ಹಾಗೂ ಯಾವುದೇ ತುರ್ತು ಪರಿಸ್ಥಿತಿಯಲ್ಲಿ 112 ನಂಬರಗೆ ಕರೆ ಮಾಡುವ ಕುರಿತು, ಅಸ್ಪೃಶ್ಯತೆ ಆಚರಣೆ ತಡೆಗಟ್ಟವುದು, ಮಹಿಳಾ ಮಕ್ಕಳ ಮೇಲಿನ ದೌರ್ಜನ್ಯ ತಡೆ, ಸಂಚಾರಿ ನಿಯಮಗಳು ಪಾಲಿಸುವ
ಬಗ್ಗೆ ಮತ್ತು ಹೆಣ್ಣು ಮಕ್ಕಳು ತಮ್ಮ ಸ್ವರಕ್ಷಣೆಗಾಗಿ ಯಾವಾಗಲೂ ತಮ್ಮ ಜೊತೆಗೆ ಪೆಪ್ಪರ್ ಸ್ಪ್ರೇ ಮತ್ತು ಕಾರದಪುಡಿ ಇಟ್ಟುಕೊಳ್ಳಲು ತಿಳಿಸಿದರು.
ಈ ಸಂಧರ್ಭದಲ್ಲಿ ಡಿವೈಎಸ್ಪಿ, ಸಿ.ಪಿ.ಐ ಮತ್ತು ಸಿಬ್ಬಂದಿ ಹಾಗೂ ಕಾಲೇಜಿನ ಎಲ್ಲಾ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಭಾಗಿಯಾಗಿದ್ದರು.
PublicNext
02/11/2021 03:36 pm