ಕುಂದಗೋಳ : ಅಕ್ಷರ ದಾಸೋಹ ನೌಕರರು ಹಾಗೂ ಆಶಾ ಕಾರ್ಯಕರ್ತೆಯರು ವೇತನ ಹೆಚ್ಚಳ, ಸೇವಾ ಭದ್ರತೆ ಸೇರಿದಂತೆ ಸರ್ಕಾರದಿಂಜ ತಮ್ಮ ವೃತ್ತಿಗೆ ಅಗತ್ಯ ಸಹಕಾರ ನೀಡುವಂತೆ ತಹಶೀಲ್ದಾರ ಅಶೋಕ್ ಶಿಗ್ಗಾಂವಿ ಅವರ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಮನವಿ ಸಲ್ಲಿಸಿದರು.
ತಹಶೀಲ್ದಾರ ಕಚೇರಿ ಆವರಣದಲ್ಲಿರುವ ಒಂದು ಗಂಟೆಗೂ ಅಧಿಕ ಕಾಲ ಪ್ರತಿಭಟನೆ ನಡೆಸಿದ ಅಕ್ಷರ ದಾಸೋಹ ನೌಕರರು, ನಮ್ಮನ್ನು ಅಡುಗೆ ಸಹಾಯಕರು ಎಂದು ನೇಮಿಸಿಕೊಂಡು ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ಸ್ವಚ್ಚತೆ ಹಾಗೂ ಶಾಲಾ ಶಿಕ್ಷಕರು ಹೋಟೆಲ್'ಗೆ ಚಹಾ ಕಾಫಿ ತರಲು ಬಳೆಸಿಕೊಳ್ಳುತ್ತಿದ್ದಾರೆ ನಿರಾಕರಿಸಿದ್ದಲ್ಲಿ ಕೆಲಸದಿಂದ ತೆಗೆಯುವ ಬೆದರಿಕೆ ಒಡ್ಡೊತ್ತಿದ್ದಾರೆ. ಇಡೀ ಕುಂದಗೋಳ ತಾಲೂಕಿನ ಎಲ್ಲ ಹಳ್ಳಿಗಳ ಶಾಲೆಯ ಅಕ್ಷರ ದಾಸೋಹದ ನೌಕರರ ಪರಿಸ್ಥಿತಿ ಹೀಗೆ ಇದೆ ನಮ್ಮ ಕರ್ತವ್ಯ ಯಾವುದು ತಿಳಿಸಿ ಎಂದರು.
ಇನ್ನೂ ಆಶಾ ಕಾರ್ಯಕರ್ತೆಯರು ರಾತ್ರಿ 8 ಗಂಟೆಯವರೆಗೂ ಕರ್ತವ್ಯ ಮಾಡಿದರೂ, ಸರಿಯಾದ ವೇತನ ಸಿಗುತ್ತಿಲ್ಲ ಮತ್ತು ಮೇಲಾಧಿಕಾರಿಗಳು ಡಾಟಾ ಎಂಟ್ರಿ ಕೆಲಸವನ್ನು ನಮಗೆ ವಹಿಸುತ್ತಿದ್ದಾರೆ ಎಂದರು.
ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸರ್ಕಾರ ಸೂಕ್ತ ಕ್ರಮ ಕೈಗೊಂಡು ನಮ್ಮ ಕರ್ತವ್ಯ ಯಾವುದು ? ಎಂಬ ರೂಪುರೇಷೆ ಜೊತೆ ಸೂಕ್ತ ವೇತನ ನೀಡುವಂತೆ ಒತ್ತಾಯಿಸುತ್ತಿದ್ದಾರೆ.
PublicNext
28/10/2021 05:15 pm