ಬೆಂಗಳೂರು: ಗಾಂಧಿ ಜಯಂತಿ ಅಂಗವಾಗಿ ಬೆಂಗಳೂರಿನ ಗಾಂಧಿಭವನದ ಖಾದಿ ಎಂಪೋರಿಯಂನಲ್ಲಿ ಖಾದಿ ಮೇಳ ಹಮ್ಮಿಕೊಳ್ಳಲಾಗಿತ್ತು. ಖಾದಿ ಮೇಲೆ ಉದ್ಘಾಟಿಸಿದ ನಂತರ ಖಾದಿ ಉತ್ಪನ್ನ ವೀಕ್ಷಣೆ ವೇಳೆ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಸಚಿವ ಗೋವಿಂದ್ ಕಾರಜೋಳ ಅವರಿಗೆ ಸೀರೆ ಸೆಲೆಕ್ಷನ್ ಬಗ್ಗೆ ಸಲಹೆ ನೀಡಿದ್ದಾರೆ.
ಖಾದಿ ಮೇಳದಲ್ಲಿ ಪತ್ನಿಗಾಗಿ ಸಿಎಂ ಸೀರೆ ಖರೀದಿಸಿದ್ದಾರೆ. ಇದೇ ವೇಳೆ ಅಲ್ಲಿದ್ದ ಸಚಿವ ಗೋವಿಂದ್ ಕಾರಜೋಳ ಅವರಿಗೆ ಬನ್ರೀ ನೀವೂ ಸೀರೆ ಖರೀದಿ ಮಾಡಿ ಎಂದಿದ್ದಾರೆ. ಅದಕ್ಕೆ ಗೋವಿಂದ್ ಕಾರಜೋಳ, ಅವೆಲ್ಲ ನನಗೆ ಗೊತ್ತಾಗೊಲ್ಲ ಎಂದಿದ್ದಾರೆ. ಅದಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ 'ಈಗಲಾದ್ರೂ ಕಲಿತುಕೊಳ್ಳಿ' ಎನ್ನುವ ಮೂಲಕ ಹಾಸ್ಯ ಚಟಾಕಿ ಹಾರಿಸಿದ್ದಾರೆ. ನಂತರ ಸಿಎಂ ಬೊಮ್ಮಾಯಿ 16031 ರೂಪಾಯಿ ಬೆಲೆಯ ಸೀರೆ ಖರೀದಿಸಿದರು.
PublicNext
02/10/2021 07:41 pm