ಕುಮಟಾ: ಹಬ್ಬದ ಸಂಭ್ರಮದಲ್ಲಿ ಸಾರ್ವಜನಿಕ ಗಣೇಶನಿಗೆ ಹಾಕಿದ್ದ ಚಿನ್ನಾಭರಣ ತೆಗೆಯದೇ ವಿಸರ್ಜನೆ ಮಾಡಿದ ಘಟನೆ ಕುಮಟಾದ ಮಳಲಿ ಗೋನರಹಳ್ಳಿಯಲ್ಲಿ ನಡೆದಿದೆ.
ಗಣೇಶನ ಸಮೇತ ಚಿನ್ನಾಭರಣ ನೀರಿಗೆ ಹಾಕಿ ಚಿಂತಿತರಾದ ಗ್ರಾಮಸ್ಥರಿಗೆ ದೇವರಭಾವಿ ಗ್ರಾಮದ ಯುವಕ ವಿನಯ್ ನಾಯಕ್ ಎಂಬುವವರು ಸ್ಕೂಬಾ ಡೈ ಗೆ ಬಳಸುವ ಪರಿಕರ ಬಳಸಿ ನೀರಿನಲ್ಲಿ ಮುಳಗಿ ಕೊನೆಗೂ ಗಣಪತಿಯೊಂದಿಗೆ ವಿಸರ್ಜಿಸಿದ ಆಭರಣಗಳನ್ನು ತೆಗೆದುಕೊಟ್ಟಿದ್ದಾರೆ.
ಸದ್ಯ ಗ್ರಾಮಸ್ಥರು ಯುವಕನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
PublicNext
16/09/2021 02:28 pm