ನವಲಗುಂದ: ಪಟ್ಟಣದ ನಾಗಲಿಂಗ ಸ್ವಾಮಿ ಮಠದಲ್ಲಿ ಅಖಿಲ ಕರ್ನಾಟಕ ಭಾವಸಾರ ಕ್ಷತ್ರಿಯ ಸಮಾಜದಿಂದ ಕೊರೊನಾ ವಾರಿಯರ್ ರೇಣುಕಾ ದೇವರಾಜ ಬೆಳಮಕರ ಹಾಗೂ ಪುರಸಭೆ ಸದಸ್ಯೆಯಾಗಿ ಆಯ್ಕೆಯಾದ ಮಂಜುಳಾ ಏಕನಾಥ ಜಾಧವ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ನಾಗಲಿಂಗ ಸ್ವಾಮಿ ಮಠದ ವೀರೇಂದ್ರ ಸ್ವಾಮೀಜಿ, ತಾಲೂಕಾ ಅಧ್ಯಕ್ಷ ದೇವರಾಜ ಬೆಳಮಕರ, ಹನಮಂತಪ್ಪ ಮುಧೋಳೆ, ವಿಠ್ಠಲ ಮಾಡಿಕರ, ಶ್ರೀಕಾಂತ ಸುಲಾಖೆ, ವಿಷ್ಣು ಮುಧೋಳೆ, ವೆಂಕಟೇಶ ಸರ್ವದೆ, ಜ್ಞಾನೇಶ್ವರ ತಾಂದಳೆ, ರಮೇಶ ತಾಂದಳೆ, ಪ್ರಮೋದ ಸುಲಾಖೆ, ಕಾಶಿನಾಥ ವಂಟಕರ, ನಾರಾಯಣ ಸರ್ವದೆ, ಸುರೇಶ ಮುದೋಳಕರ, ಪುಂಡಲೀಕ ಮುಧೋಳೆ ಹಾಗೂ ಮಹಿಳಾ ಘಟಕದ ಸದಸ್ಯರು ಉಪಸ್ಥಿತರಿದ್ದರು.
PublicNext
29/01/2021 09:34 am