ಮುಲ್ಕಿ: ಹಳೆಯಂಗಡಿಯ ಯೋಗ ಮಂದಿರದಲ್ಲಿ ಭಾರತದ ಕಾನೂನು ನೆರವು ಕೇಂದ್ರ ಮಂಗಳೂರು ಮತ್ತು ವಿಜಯ ಮಾಸ್ಟರ್ ಟ್ರಸ್ಟ್ ಹಳೆಯಂಗಡಿ ಸಹಯೋಗದಲ್ಲಿ 2021ರ ಗಣರಾಜೋತ್ಸವ ಪ್ರಯುಕ್ತ ಕಾನೂನು ಮಾಹಿತಿ ಶಿಬಿರವನ್ನು ಭಾರತದ ಕ್ರೈಸ್ತ ಚರ್ಚುಗಳ ಒಕ್ಕೂಟ ಮಂಗಳೂರು ನಿರ್ದೇಶಕ ರೆ. ಐಸನ್ ಪಾಲನ್ನ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, “ಡಾ. ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನ ಧ್ಯೇಯಗಳನ್ನು ನಾವು ಪಾಲಿಸಿಕೊಂಡು ಉತ್ತಮ ಪ್ರಜೆಗಳಾಗಿ ಬಾಳಬೇಕು. ಭಾರತದ ಸಂವಿಧಾನ ಹಾಗೂ ಎಲ್ಲ ಕಾನೂನುಗಳನ್ನು ನಾವೆಲ್ಲರೂ ಅರಿತು ದೇಶವನ್ನು ಅಭಿವೃದ್ಧಿಗೊಳಿಸೋಣ” ಎಂದರು.
ಭಾರತದ ಕಾನೂನು ನೆರವು ಕೇಂದ್ರದ ಅಧ್ಯಕ್ಷ, ವಕೀಲ ಡೇನಿಯಲ್ ದೇವರಾಜ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಪ್ರೊಫೆಸರ್ ಡಾ. ಅರುಣ್ ಡೊಮಿನಿಕ್ ಎನ್.ಐ.ಟಿ.ಕೆ. ಸುರತ್ಕಲ್, ಜೋಸೆಫ್ ಜಾರ್ಜ್ ಎಮ್.ಡಿ.ಎಲ್ ಮುಂಬಯಿ, ಸಮಾಜ ಸೇವಕಿ ನ್ಯಾನ್ಸಿ ಕರ್ಕಡ , ಶ್ರೀನಿವಾಸ್ ಮೆಡಿಕಲ್ ಸೈನ್ಸ್ ಕಾಲೇಜಿನ ಜಾರ್ಜ್, ವಾಸ್ತವ್ ಕುಣಿಗಲ್, ಮಂಜುನಾಥ್ ಉಪಸ್ಥಿತರಿದ್ದರು. ಎಸ್.ಡಿ. ಎಮ್. ಕಾನೂನು ಮಹಾವಿದ್ಯಾಲಯ ಮಂಗಳೂರಿನ ನಿಯಾಜ್ “ಭಾರತದ ಸಂವಿಧಾನದ ಬಗ್ಗೆ, ಕರ್ನಾಟಕ ಉಚ್ಚ ನ್ಯಾಯಾಲಯದ ವಕೀಲ ಎಸ್.ಎಮ್. ಮಹಮ್ಮದ್ “ಮೂಲಭೂತ ಹಕ್ಕುಗಳು ಮತ್ತು ಸಾರ್ವಜನಿಕ ಹಿತಾಸಕ್ತಿ ದಾವೆ” ಬಗ್ಗೆ ಕಾನೂನು ಮಾಹಿತಿ ನೀಡಿದರು.
ಮಂಗಳೂರು ನ್ಯಾಯಾಂಗ ಇಲಾಖೆಯ ಅಕ್ಬರ್ ನಿರೂಪಿಸಿದರು. ಮೇರಿ ಸ್ವಪ್ನ ಸ್ವಾಗತಿಸಿದರು. ಹಳೆಯಂಗಡಿ ಸಿ.ಎಸ್.ಐ. ಆಂಗ್ಲ ಮಾಧ್ಯಮ ಶಾಲೆ ಶಿಕ್ಷಕಿ ಪ್ರಸನ್ನಿ ವಂದಿಸಿದರು.
PublicNext
24/01/2021 04:02 pm