ಕೆ.ಆರ್. ಪುರ: ವಿಶ್ವಕ್ಕೆ ಮಾದರಿಯಾಗುವಂತಹ ಶ್ರೀರಾಮಮಂದಿರ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿದೆ. ಈ ದೇವಾಲಯ ನಿರ್ಮಾಣಕ್ಕಾಗಿ ಎಲ್ಲೆಡೆಯಿಂದ ದೇಣಿಗೆ ಸಂಗ್ರಹವಾಗುತ್ತಿದೆ. ಸದ್ಯ ಮುಸ್ಲಿಂ ಮುಖಂಡರು ಕೂಡಾ ರಾಮಮಂದಿರ ನಿರ್ಮಾಣಕ್ಕೆ 6 ಲಕ್ಷ ದೇಣಿಗೆ ನೀಡಿದ್ದಾರೆ.
‘ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಕೈಗೊಂಡಿರುವ ಅಯೋಧ್ಯೆಯ ಶ್ರೀರಾಮಮಂದಿರ ನಿಧಿ ಸಂಗ್ರಹ ಮಹಾ ಅಭಿಯಾನದಲ್ಲಿ ಕೆ.ಆರ್.ಪುರದ ಕ್ಷೇತ್ರದ ಎರಡು ವಾರ್ಡ್ ನಿಂದ ಸುಮಾರು ₹1 ಕೋಟಿ ನಿಧಿ ಸಂಗ್ರಹವಾಗಿದೆ’ ಎಂದು ಬೈರತಿ ಬಸವರಾಜ್ ತಿಳಿಸಿದರು.
‘ಮುಸ್ಲಿಮರು ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿರುವುದು ಸಂತಸದ ವಿಚಾರ. ಸೇವೆಗೆ ಧರ್ಮದ ಭೇದವಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ’ ಎಂದರು.
ಜಯಪ್ರಕಾಶ್ ₹5 ಲಕ್ಷ ಹಾಗೂ ಪಿ.ಜೆ.ಅಂತೋನಿಸ್ವಾಮಿ, ವೈಯಕ್ತಿಕವಾಗಿ ₹5 ಲಕ್ಷ ನೀಡಿದ್ದಾರೆ ಎಂದು ಹೇಳಿದರು.
‘ವಾರ್ಡ್ ಮಟ್ಟದಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗುವುದು. ನಮ್ಮ ಕ್ಷೇತ್ರದಲ್ಲಿ ಹೆಚ್ಚಿನ ದೇಣಿಗೆ ಸಂಗ್ರಹಿಸಲಾಗುವುದು. ಸಂಘ ಪರಿವಾರದವರು ಮನೆ ಮನೆ ಅಭಿಯಾನದಲ್ಲಿ ದೇಣಿಗೆ ಸಂಗ್ರಹಿಸುತ್ತಿದ್ದು, ಪ್ರತಿಯೊಬ್ಬರೂ ದೇಣಿಗೆ ನೀಡುವ ಮೂಲಕ ರಾಮಮಂದಿರ ನಿರ್ಮಾಣಕ್ಕೆ ಕೈಜೋಡಿಸಬೇಕು’ ಎಂದು ಮನವಿ ಮಾಡಿದರು.
PublicNext
21/01/2021 08:41 am