ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸ ವರ್ಷದ ಸಂಭ್ರಮ: ಪ್ರಧಾನಿ ಸೇರಿ ಗಣ್ಯರಿಂದ ಶುಭಾಶಯ

ನವದೆಹಲಿ: 2021 ಹೊಸ ವರ್ಷದ ಸಂಭ್ರಮದಲ್ಲಿರುವ ದೇಶದ ಜನತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶುಭಾಶಯ ಕೋರಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಎಲ್ಲರಿಗೂ 2021 ಹೊಸ ವರ್ಷದ ಶುಭಾಶಯಗಳು. ಈ ವರ್ಷ ಎಲ್ಲರಿಗೂ ಉತ್ತಮ ಆರೋಗ್ಯ, ಸಂತೋಷ ಹಾಗೂ ಸಮೃದ್ಧಿ ದೊರೆಯಲಿ.

ಭರವಸೆ ಮತ್ತು ಸ್ವಾಸ್ಥ್ಯದ ಮನೋಭಾವ ಮೇಲುಗೈ ಸಾಧಿಸಲಿ ಎಂದು ಹೇಳಿದ್ದಾರೆ.

ಇದರಂತೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಟ್ವೀಟ್ ಮಾಡಿ, ಕೊರೋನಾ ಸಾಂಕ್ರಾಮಿಕ ರೋಗದ ಸವಾಲಿನ ನಡುವಲ್ಲೇ ಮುನ್ನಡೆಯುವ ದೇಶದ ದೃಢ ನಿರ್ಧಾರಕ್ಕೆ ಹೊಸ ವರ್ಷ ಬಲ ನೀಡಲಿ.

ಎಲ್ಲರಿಗೂ ಹೊಸ ವರ್ಷದ ಶುಭಾಶಗಳು ಎಂದು ತಿಳಿಸಿದ್ದಾರೆ.

ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ದೇಶದ ಎಲ್ಲಾ ನಾಗರೀಕರಿಗೂ 2021 ಹೊಸ ವರ್ಷದ ಶುಭಾಶಯಗಳು ಎಂದು ಹೇಳಿದ್ದಾರೆ.

Edited By : Nirmala Aralikatti
PublicNext

PublicNext

01/01/2021 09:43 am

Cinque Terre

63.26 K

Cinque Terre

2