ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಬರಿಮಲೆ: ಮಕರವಿಳಕ್ಕು ಉತ್ಸವಕ್ಕೆ ಅಯ್ಯಪ್ಪ ಸನ್ನಿಧಿ ಸಜ್ಜು

ಶಬರಿಮಲೆ: ಅಯ್ಯಪ್ಪ ಸ್ವಾಮಿ ಸನ್ನಿಧಿಯಲ್ಲಿ ನಡೆಯುವ ಮಕರವಿಳಕ್ಕು ಉತ್ಸವಕ್ಕೆ ಶಬರಿಮಲೆ ಸಜ್ಜಾಗಿದ್ದು, ದೇವಸ್ಥಾನ ಪ್ರವೇಶಿಸಲು ಭಕ್ತರಿಗೆ ಗುರುವಾರ ಬೆಳಿಗ್ಗೆಯಿಂದ ಅವಕಾಶ ನೀಡಲಾಗುತ್ತದೆ.

ದೇವಸ್ಥಾನದ ಬಾಗಿಲು ಬುಧವಾರ ಸಂಜೆಯೇ ತೆರೆಯಲಾಗಿದೆ. ಮಕರವಿಳಕ್ಕು ಉತ್ಸವ ಜನವರಿ 14ರಂದು ನಡೆಯಲಿದ್ದು, ಜ. 20ರಂದು ದೇವಸ್ಥಾನವನ್ನು ಬಂದ್‌ ಮಾಡಲಾಗುತ್ತದೆ ಎಂದು ತಿರುವಾಂಕೂರು ದೇವಸ್ವ ಮಂಡಳಿ (ಟಿಡಿಬಿ) ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೊರೊನಾ ವೈರಸ್‌ ಆತಂಕದ ಹಿನ್ನೆಲೆಯಲ್ಲಿ ದೇವಸ್ಥಾನದ ಮಂಡಳಿ ಅಧಿಕಾರಿಗಳು ಸಾಕಷ್ಟು ನಿರ್ಬಂಧಗಳನ್ನು ಹೇರಿದ್ದಾರೆ. ಈ ಪ್ರಕಾರ ಭಕ್ತರು ತಮಗೆ ಕೋವಿಡ್‌–19 ಇಲ್ಲ ಎಂಬ ಬಗ್ಗೆ ಪ್ರಮಾಣಪತ್ರ ಹಾಜರುಪಡಿಸಬೇಕು. ದಿನಕ್ಕೆ 5,000 ಭಕ್ತರಿಗೆ ಮಾತ್ರ ದೇವಸ್ಥಾನ ಪ್ರವೇಶಿಸಲು ಅವಕಾಶ ಒದಗಿಸಲಾಗುತ್ತದೆ. ಶಬರಿಮಲೆಗೆ ಬರುವುದಕ್ಕೆ 48 ಗಂಟೆ ಮೊದಲು ಈ ಪ್ರಮಾಣಪತ್ರ ಪಡೆದಿರಬೇಕು.

Edited By : Vijay Kumar
PublicNext

PublicNext

30/12/2020 08:55 pm

Cinque Terre

112.48 K

Cinque Terre

0