ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಅಯೋಧ್ಯೆ ಶ್ರೀರಾಮ ಮಂದಿರ ತಳಪಾಯಕ್ಕೆ ಕರುನಾಡ ಶಿಲೆಗಳು!

ಬೆಂಗಳೂರು: ಅಯೋಧ್ಯೆಯಲ್ಲಿ ನಿರ್ಮಾಣವಾಗುವ ಭವ್ಯ ಶ್ರೀ ರಾಮ ಮಂದಿರದ ತಳಪಾಯಕ್ಕೆ ಹನುಮನ ನಾಡು ಕರ್ನಾಟಕದಿಂದ ಶಿಲೆಗಳು ರವಾನೆಯಾಗುತ್ತಿವೆ.

ಬೆಂಗಳೂರಿನ ಸಾದರಹಳ್ಳಿ ಗೇಟ್ ( ಏರ್ ಪೋರ್ಟ್ ರಸ್ತೆ ) ನಲ್ಲಿ ಶಿಲೆಗಳ ಪೂಜೆ ಮತ್ತು ಅವುಗಳನ್ನು ಹೊತ್ತ ಲಾರಿಗಳ ಬೀಳ್ಕೊಡುಗೆ ಇಂದು ಶ್ರೀ ವಿವೇಕಾನಂದ ಸೇವಾ ಸಮಿತಿ, ಶ್ರೀ ಹನುಮಾನ್ ಗ್ರಾನೈಟ್ ಸಂಯೋಜನೆಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಅಯೋಧ್ಯೆ ಟ್ರಸ್ಟ್ ಸದಸ್ಯರೂ ಆಗಿರುವ ಶ್ರೀ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿ ಶಿಲಾಪೂಜೆ ನೆರವೇರಿಸಿ, ಲಾರಿಗಳಿಗೆ ಹಸಿರು ನಿಶಾನೆ ತೋರಿ ಶುಭ ಸಂದೇಶ ನೀಡಿದರು. ರಾಷ್ಟ್ರೀಯ ಸ್ವಯಂ ಸಂಘದ ಪ್ರಮುಖರಾದ ತಿಪ್ಪೇಸ್ವಾಮಿ‌, ಬಿ.ಎನ್. ಮೂರ್ತಿ , ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಮಂತ್ರಿ ಶೋಭಾ ಕರಂದ್ಲಾಜೆ, ಕೇಂದ್ರದ ಮಾಜಿ ಮಂತ್ರಿ ಡಿ.ವಿ. ಸದಾನಂದ ಗೌಡ, ಬಿಜೆಪಿ ರಾಷ್ಟ್ರೀಯ ಪ್ರಧಾನ ಸಂಘಟನಾ ಕಾರ್ಯದರ್ಶಿ ಬಿ. ಎಲ್. ಸಂತೋಷ್ , ವಿಹಿಂಪ ಮುಖಂಡರಾದ ಗೋಪಾಲ್ ಜೀ , ಕೇಶವ ಹೆಗಡೆ , ಆನಂದ ಗುರೂಜಿ , ಸ್ಥಳೀಯ ಶಾಸಕ ನಿಸರ್ಗ ನಾರಾಯಣ ಮೂರ್ತಿ ಮೊದಲಾದವರು ಉಪಸ್ಥಿತರಿದ್ದರು.

Edited By : Nagesh Gaonkar
PublicNext

PublicNext

25/10/2021 04:05 pm

Cinque Terre

33.79 K

Cinque Terre

0