ನೃತ್ಯ, ಹಾಡುಗಾರಿಕೆ, ಮಾತುಗಾರಿಕೆ, ವೇಷ-ಭೂಷಣಗಳನ್ನೊಳಗೊಂಡ ಒಂದು ಸ್ವತಂತ್ರವಾದ ಶಾಸ್ತ್ರೀಯ ಕಲೆ ಯಕ್ಷಗಾನ.
ಯಕ್ಷಗಾನ ನಾಲ್ಕು ಕಲಾಮಾಧ್ಯಮಗಳಿಂದ ಮೈಗೂಡಿನಿಂತ ಒಂದು ಸಮ್ಮಿಶ್ರ ಕಲೆ.
ಇದರಲ್ಲಿ ಸಂಗೀತ, ಸಾಹಿತ್ಯ, ನೃತ್ಯ ಮತ್ತು ಚಿತ್ರ ಈ ನಾಲ್ಕು ಕಲೆಗಳ ಔಚಿತ್ಯಪೂರ್ಣವಾದ ಸಾಮರಸ್ಯವಿದೆ.
ಇಂತಹ ಕಲೆಯನ್ನು ಕಣ್ಣ ಸನ್ನೆಯಲ್ಲೇ ಪ್ರದರ್ಶಿಸಿರುವುದು ನಿಜಕ್ಕೂ ಮೆಚ್ಚುವಂತದ್ದು.
ಕಣ್ಣ ಸನ್ನೆಯಲ್ಲೇ ನೃತ್ಯ ಚಾತುರ್ಯ ಇದು ನಿಜಕ್ಕೂ ಅದ್ಬುತವೇ ಸರಿ..
ಯಾವುದೇ ನೃತ್ಯವಾದರೂ ಲಯಬದ್ದವಾಗಿ ಸಂಗೀತಕ್ಕೆ ದೇಹವನ್ನು ಚಲಿಸುವ ಒಂದು ಕಲೆ ಆದರೆ ಇಲ್ಲೊಬ್ಬ ಕಲಾವಿದರ ಕಣ್ಣಲ್ಲಿ ಕಲಾದೇವತೆ ಕುಣಿದಾಡಿರುವ ಪರಿ ನಿಜಕ್ಕೂ ಅಚ್ಚರಿಯೇ ಸರಿ..
ಇದು ವಿರಳಾತಿ ವಿರಳರಲ್ಲಿ ಕಾಣಬಹುದಾದ ಕಲೆ ಅಂತಹ ಕಲೆಯ ಝಲಕ್ ನಿಮಗಾಗಿ ಇಲ್ಲಿದೆ ನೋಡಿ…
PublicNext
18/09/2020 11:07 pm