ನವದೆಹಲಿ : ಇಂದು ದೆಹಲಿಯಲ್ಲಿ ನಿಮಾಣವಾಗುತ್ತಿರುವ ನೂತನ ಸಂಸತ್ ಭವನಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಭೂಮಿಪೂಜೆ, ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸುವರು.
ಈ ಕಾರ್ಯಕ್ರಮದ ಧಾರ್ವಿುಕ ವಿಧಿವಿಧಾನಗಳ ಸಂಪೂರ್ಣ ಜವಾಬ್ದಾರಿಗಳನ್ನು ಕರ್ನಾಟಕದ ಶೃಂಗೇರಿ ಮಠಕ್ಕೆ ವಹಿಸಿರುವುದು ರಾಜ್ಯಕ್ಕೆ ಹೆಮ್ಮೆಯ ಸಂಗತಿ.
ಶಂಕುಸ್ಥಾಪನೆಗೆ ದಿನಾಂಕ ನಿಗದಿಯಾದ ಕೂಡಲೇ ಪ್ರಧಾನಿ ನರೇಂದ್ರ ಮೋದಿ ಅವರು ‘ಧಾರ್ವಿುಕ ಕಾರ್ಯಕ್ರಮಗಳು ವಿಧಿವತ್ತಾಗಿ ನಡೆಯಬೇಕು.
ಹೀಗಾಗಿ ಒಳ್ಳೆಯ ಪುರೋಹಿತರನ್ನು ಕರೆದುಕೊಂಡು ಬನ್ನಿ’ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರಿಗೆ ಸೂಚಿಸಿದ್ದರು.
ಈ ಹಿನ್ನೆಲೆಯಲ್ಲಿ ಶೃಂಗೇರಿ ಜಗದ್ಗುರುಗಳಾದ ಭಾರತೀ ತೀರ್ಥ ಮಹಾಸ್ವಾಮಿ ಅವರನ್ನು ಸಂಪರ್ಕಿಸಿದ ಜೋಶಿಯವರು, ಪ್ರಧಾನಿಯವರ ಆಶಯದ ಬಗ್ಗೆ ವಿವರಿಸಿದ್ದಾರೆ.
ಪುರೋಹಿತರಾದ ಟಿ.ವಿ. ಶಿವಕುಮಾರ ಶರ್ಮ, ಕೆ.ಎಸ್. ಲಕ್ಷ್ಮೀ ನಾರಾಯಣ ಸೋಮಯಾಜಿ, ಕೆ.ಎಸ್. ಗಣೇಶ ಸೋಮಯಾಜಿ, ಸಿ. ನಾಗರಾಜ ಅಡಿಗ ಶೃಂಗೇರಿಯಿಂದ ದೆಹಲಿಗೆ ಬಂದಿದ್ದರೆ, ರಾಘವೇಂದ್ರ ಭಟ್ಟ ಮತ್ತು ಋಷ್ಯಶೃಂಗ ಎಂಬವರು ದೆಹಲಿಯ ಶೃಂಗೇರಿ ಮಠದ ಶಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಈ 6 ಮಂದಿ ಶಿಲಾನ್ಯಾಸಕ್ಕೆ ಸಂಬಂಧಿಸಿದ ಧಾರ್ವಿುಕ ಪೂಜಾ ಕೈಂಕರ್ಯದಲ್ಲಿ ಭಾಗಿಯಾಗಲಿದ್ದಾರೆ.
PublicNext
10/12/2020 07:27 am