ನವದೆಹಲಿ : ಎರೆಡು ದಿನಗಳ ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಿಗ್ಗೆ ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ಬಿಜೆಪಿ ನಾಯಕರ ಸ್ವಾಗತದಲ್ಲಿ ಬಂದಿಳಿದರು.
ಗುರುವಾರ ವಿಧಿವಶರಾದ ಗುಜರಾತ್ ಮುಖ್ಯಮಂತ್ರಿ ಕೇಶುಭಾಯ್ ಪಟೇಲ್ ಅವರ ಗಾಂಧಿ ನಗರದ ನಿವಾಸಕ್ಕೆ ತೆರಳಿ ಅಂತಿಮ ನಮನ ಸಲ್ಲಿಸಿ ನರ್ಮದಾ ಜಿಲ್ಲೆ ಕೆವಾಡಿಯಾಗೆ ಆಗಮಿಸಿದ ಪ್ರಧಾನಿ ಜಂಗಲ್ ಸಫಾರಿ ಖ್ಯಾತಿ ಪಡೆದ ಸರ್ದಾರ್ ಪಟೇಲ್ ಜೂಲಾಜಿಕರ್ ಉದ್ಯಾನವನ ಉದ್ಘಾಟನೆ ಮಾಡಿ ಆರೋಗ್ಯವನವನ್ನು ಸುತ್ತಾಡಿ ಅಲ್ಲಿರುವ ವೈದ್ಯಕೀಯ ಸಸ್ಯಗಳು ಮತ್ತು ಗಿಡಮೂಲಿಕೆಗಳ ಬಳಕೆ ಪ್ರಯೋಜನದ ಮಾಹಿತಿ ಪಡೆದುಕೊಂಡರು.
ಸರ್ದಾರ್ ಪಟೇಲ್ ಜೂಲಾಜಿಕರ್ ಪಾರ್ಕ್ 182 ಮೀಟರ್ ಉದ್ದದ ವಲ್ಲಭಭಾಯಿ ಪಟೇಲ್ ಎಕತಾ ಪ್ರತಿಮೆ ನಿರ್ಮಿಸಲಾಗಿದ್ದು ಈ ಪಾರ್ಕ್ ಸಂಪೂರ್ಣ ಪ್ರಪಂಚಾದ್ಯಂತ ಇರುವ ಕಾಡು ಪ್ರಾಣಿ ಪಕ್ಷಿಗಳ ಸಂಗ್ರಹ ಹೊಂದಿದೆ ಈ ಪಾರ್ಕ್ ಮೋದಿ ಭೇಟಿ ವೇಳೆ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿ, ರಾಜ್ಯಪಾಲ ಆಚಾರ್ಯ ದೇವ್ರತ್ ಉಪಸ್ಥಿತರಿದ್ದರು.
PublicNext
30/10/2020 01:57 pm