ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರತಿಷ್ಠಿತ ನೋಬಲ್ ಪ್ರಶಸ್ತಿಗೆ ಕೋಮು ಗಲಭೆ ಪ್ರಚೋದಕರ ಹೆಸರು ಶಿಫಾರಸು ನಾಚೀಗೇಡಿತನ ಅಲ್ಲವೆ?

ವಿಶ್ಲೇಷಣೆ : ಕೇಶವ ನಾಡಕರ್ಣಿ

ಎಡಪಂಥೀಯರ ಮುಖವಾಣಿ ಅಮೇರಿಕದ ಟೈಮ್ ಮ್ಯಾಗ್ಜೀನ್.... ಭಾರತದ ವಿರುದ್ಧ ವಿಷಕಾರುವ ಅವಕಾಶವನ್ನೂ ಎಂದೂ ಬಿಟ್ಟುಕೊಡುವುದಿಲ್ಲ.

ನರೇಂದ್ರ ಮೋದಿ ಪ್ರಧಾನಿ ಆದ ನಂತರವಂತೂ ಈ ಪತ್ರಿಕೆ ಭಾರತದ ವಿರುದ್ದ ಅಪಪ್ರಚಾರ ಮಾಡಿದ್ದೇ ಮಾಡಿದ್ದು. ಪ್ರಧಾನಿ ಮೋದಿ, ಬಿಜೆಪಿ ಸರಕಾರ ಮುಸ್ಲಿಂ ಸಮುದಾಯವನ್ನು ತುಳಿಯುತ್ತಿದೆ ಬೊಗಳಿದ್ದೇ ಬೊಗಳಿದ್ದು.

ನರೇಂದ್ರ ಮೋದಿ 2014 ರಲ್ಲಿ ಮೊದಲ ಬಾರಿಪ್ರಧಾನಿಯಾದ ನಂತರ ಇದೇ ಟೈಮ್ ಮ್ಯಾಗ್ಜೀನ್ ಕವರ್ ಪುಟದಲ್ಲಿ ಏನು ಪ್ರಿಂಟ್ ಮಾಡಿತ್ತು ಗೊತ್ತೆ?

"ಇಂಡಿಯಾಸ್ ಡಿವೈಡರ್ ಇನ್ ಚೀಫ್" ಅಂತ ದೊಡ್ಡ ದೊಡ್ಡ ಅಕ್ಷರಗಳಲ್ಲಿ ಮುದ್ದಿಸಿತ್ತು. ಅಂದ್ರೆ ಭಾರತವನ್ನು ವಿಭಜಿಸುವ ವ್ಯಕ್ತಿ ಈಗ ದೇಶದ ಮುಖ್ಯಸ್ಥನಾಗಿದ್ದಾನೆ ಮೋದಿ ಬಗ್ಗೆ ವ್ಯಂಗ್ಯವಾಡಿತ್ತು.

ಈಗ Fact Check Website ನ ಅಲ್ಟ್ ನ್ಯೂಜ್ ನ ಸಂಸ್ಥಾಪಕರಾದ ಮೊಹಮ್ಮದ್ ಜುಬೇರ್ ಹಾಗೂ ಪ್ರತಿಕ್ ಸಿನ್ಹಾ ಎಂಬ ಕುಖ್ಯಾತರ ವಿಷಯಕ್ಕೆ ಬರೋಣ.

ಈ ಮೊಹಮ್ಮದ್ ಜುಬೇರ್ ಬೇರಾರು... ಅಲ್ಲ ಸುಳ್ಳು, ನಕಲಿ ಸುದ್ದಿಗಳ ಖ್ಯಾತಿಯ ಅಲ್ಟ್ ನ್ಯೂಜ್ ಸಂಸ್ಥೆಯ ಸಂಸ್ಥಾಪಕ. ಧಾರ್ಮಿಕ ಭಾವನೆ ಕೆರಳಿಸಿ ದೇಶದಲ್ಲಿ ಅಶಾಂತಿಯುಂಟು ಮಾಡಲು ಸಂಚು ರೂಪಿಸಿದ್ದ ಎಂಬ ಆಪಾದನೆ ಹೊತ್ತು ತಿಹಾರ್ ಜೈಲು ಸೇರಿದ್ದ.

ಈತ ಒಂದು ವಿವಾದಾತ್ಮಕ , ಹಿಂದೂಗಳ ಆರಾಧ್ಯ ದೈವ ಹನುಮಾನ್ ನನ್ನು ವ್ಯಂಗ್ಯ ಮಾಡಿ ಟ್ವೀಟ್ ಮಾಡಿದ್ದ. 2014 ರಲ್ಲಿದ್ದ ಹನಿಮೂನ್ ಹೊಟೇಲ್ 2014 ರ ನಂತರ ಹನುಮಾನ್ ಹೊಟೇಲ್ ಆಯಿತು ಎಂದು ಹಿಂದೂ ದೇವರನ್ನು ಅವಹೇಳನ ಮಾಡಿದ್ದ. ಅಂದ್ರೆ 2014 ರಲ್ಲಿ ದೇಶದಲ್ಲಿ ಬಿಜೆಪಿ ಸರಕಾರ ಬಂದ ನಂತರ ಹನಿಮೂನ್ ಸಹ ಹನುಮಾನ್ ಆಗುತ್ತಿವೆ ಎಂಬುದು ಈತನ ಹಾಸ್ಯಾಸ್ಪದ ಮಾತಾಗಿತ್ತು. ಇದೇ ಕಾರಣಕ್ಕೆ ಈತ ಜೈಲು ಕಂಬಿ ಎಣಿಸಿದ್ದ.

ನಾವು ಭಾರತೀಯರು, ಸಹಿಷ್ಣುಗಳು. ಹೀಗಾಗಿಯೇ ಈತನ ದುಷ್ಟ ಬುದ್ಧಿಯನ್ನು ಸಹಿಸುತ್ತಲೇ ಬಂದಿದ್ದೇವೆ. ಇಷ್ಟು ಮಾತ್ರವಲ್ಲ ನಮ್ಮ ನೆಲದ ಕಾನೂನಿನ ಫಲವಾಗಿ ಈತ ಇತ್ತೀಚೆಗೆ ಜಾಮೀನು ಪಡೆದು ಹೊರ ಬಂದಿದ್ದಾನೆ.

ಹನಿಮೂನ್ ಪದವನ್ನು ಅಪಭ್ರಂಶ ಮಾಡಿ ಹನುಮಾನ್ ಮಾಡಿ ಜೈಲು ಸೇರಿದಾಗ ಮೋದಿ ವಿರೋಧಿಗಳು, ಎಡಪಂಥೀಯ ವಾರಸುದಾರರು, ಇದೇ ಅಸಾದುದ್ದೀನ ಓವೈಸಿ ಮಾಡಿದ ಭಾಷಣಗಳು ಸಹ ಅಷ್ಟೇ ಪ್ರಚೋದನ್ಮತಕವಾಗಿದ್ದವು. ಭಾರತ ಬಿಟ್ಟು... ಇವರು ಇದೇ ಪ್ರಚೋದನಾತ್ಮ ಭಾಷಣಗಳನ್ನು ಬೇರೆ ದೇಶಗಳಲ್ಲಿ ಮಾಡಿದ್ದರೆ ಅದರ ಪರಿಣಾಮ ಬೇರೆನೇ ಆಗುತ್ತಿತ್ತು.

ಹಾಗಾದ್ರೆ ಟೈಮ್ ಮ್ಯಾಗ್ಜೀನ್ ಗೂ... ಈ ಮೊಹಮ್ಮದ್ ಜುಬೇರ್ ಗೂ ಏನು ಸಂಬಂಧ ಅಂತ ಕೇಳ್ತೀರಾ?

ಧಾರ್ಮಿಕ ಭಾವನೆ ಪ್ರಚೋದಿಸಿ ಭಾರತದಲ್ಲಿ ದಂಗೆ ಹಿಂಸಾಚಾರ ಉಂಟು ಮಾಡಲು ಯತ್ನಿಸಿದ ಆರೋಪ ಹೊತ್ತು ಜೈಲು ಸೇರಿದ್ದ ಈತ ಹಾಗೂ ಈತನ ಇನ್ನೊಬ್ಬ ಸ್ನೇಹಿತ ಪ್ರತೀಕ್ ಸಿನ್ಹಾ ಶಾಂತಿ ದೂತರಂತೆ. ಇವರಿಬ್ಬರೂ ನೊಬೆಲ್ ಶಾಂತಿ ಪ್ರಶಸ್ತಿ ಪ್ರಶಸ್ತಿ ಪಡೆಯಲು ಅರ್ಹರಂತೆ. ಇದೇ ಕಾರಣಕ್ಕೆ ನೋಬಲ್ ಶಾಂತಿ ಪ್ರಶಸ್ತಿಗೆ ಇವರಿಬ್ಬರ ಹೆಸಲು ಶಿಫಾರಸು ಮಾಡಿತ್ತು ಇದೇ ಟೈಮ್ ಮ್ಯಾಗ್ಜೀನ್.

ವ್ಹಾ... ಹೇಗಿದೆ ನೋಡಿ....ಟೈಮ್ ಮ್ಯಾಗಜೀನ್ ದೃಷ್ಟಿಯಲ್ಲಿ ಸುಳ್ಳು ಸುದ್ದಿಗಳ ಈ ಇಬ್ಬರು ಸರದಾರರು ಶಾಂತಿ ದೂತರಂತೆ.

ಜುಬೇರ್ ಹಾಗೂ ಪ್ರತೀಕ್ ಸಿನ್ಹಾ ಹೆಸರನ್ನು ನೋಬಲ್ ಪುರಸ್ಕಾರಕ್ಕೆ ಶಿಫಾರಸು ಮಾಡುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಅವಮಾನಿಸುವುದೇ ಟೈಮ್ ಮ್ಯಾಗಜೀನ್ ಅಜೆಂಡಾ ಅಂತ ಬೇರೆ ಹೇಳಬೇಕಾಗಿಲ್ಲ.

ನೋಡಿ ಎಂಥ ದುರ್ದೈವ....

ಸಾಹಿತ್ಯ, ವಿಜ್ಞಾನ, ಶಾಂತಿ ಸ್ಥಾಪನೆಗಾಗಿ ಪ್ರತಿಷ್ಠಿತ ನೋಬಲ್ ಪುರಸ್ಕಾರ ಪಡೆದ ರವೀಂದ್ರನಾಥ ಟ್ಯಾಗೋರ್, ಡಾ.ಸಿ ವಿ ರಾಮನ್‌, ಮದರ್ ಥೆರೆಸಾ ಅವರಂಥ ದಿಗ್ಗಜರ ಸಾಲಿಗೆ ಈ ಪುಂಡ ಪೋಕರಿಗಳನ್ನು ಸೇರಿಸಿ, ಭಾರತವನ್ನು ಮಾತ್ರವಲ್ಲ ಈ ದಿಗ್ಗಜರನ್ನೂ ಅವಮಾನಿಸಿದೆ ಟೈಮ್ ಪತ್ರಿಕೆ.

ಇದು ಟೈಮ್ ಮ್ಯಾಗಜೀನ್ 'ಬೌದ್ಧಿಕ ದಿವಾಳಿಯ ಪ್ರತೀಕ. ಭಾರತ ವಿರೋಧಿ ಅಭಿಪ್ರಾಯಗಳಿಗೆ ವೇದಿಕೆ ಕಲ್ಪಿಸುವುದೇ ಇದರ ಮುಖ್ಯ ಉದ್ದೇಶ. ಈ ಮ್ಯಾಗಜೀನ್ ಪ್ರಾರಂಭವಾದಾಗಿನಿಂದಲೂ ಎಡಪಂಥೀಯ ಮುಖವಾಣಿಯಾಗಿ ಅದರ ಧೋರಣೆಗಳನ್ನು ವೈಭವೀಕರಿಸುತ್ತಲೇ ಬಂದಿದೆ.

ಇಂತಹ ಬೂಟಾಟಿಕೆಗಳನ್ನು ಪ್ರದರ್ಶಿಸುವುದು ಟೈಮ್ ಮ್ಯಾಗಜೀನ್ ದಿನನಿತ್ಯದ ಕಾಯಕ.

ಆದಾಗ್ಯೂ ಭಾರತದಲ್ಲಿ ಇಸ್ಲಾಮಿ ಹಿಂಸಾಚಾರದ ಅಲೆಯನ್ನು ಹರಡಿದ ವ್ಯಕ್ತಿ.

ನೂಪುರ ಶರ್ಮಾಗೆ ಬೆಂಬಲ ಸೂಚಿಸಿದ್ದಾರೆಂಬ ಕಾರಣಕ್ಕೆ ಉದಯಪುರದಲ್ಲಿ ಕನ್ಹಯ್ಯಾ ಲಾಲ್ ಮತ್ತು ಅಮರಾವತಿಯಲ್ಲಿ ಉಮೇಶ್ ಕೋಲ್ಹೆ ಸೇರಿದಂತೆ ಕನಿಷ್ಠ 6 ಹಿಂದೂಗಳ ಸಾವಿಗೆ ಕಾರಣವಾದವರ ಹೆಸರನ್ನು 2022 ರ ನೊಬೆಲ್ ಶಾಂತಿ ಪ್ರಶಸ್ತಿಗೆ ಶಿಫಾರಸು ಮಾಡಿದೆ ಅಂದ್ರೆ ಈ ಮ್ಯಾಗಜೀನ್ ಯಾವ ಮಟ್ಟಕ್ಕೆ ಇಳಿದಿದೆ ಎಂದು ನೀವೇ ಊಹಿಸಬಹುದು.

ಭಾರತ ವಿರೋಧಿ, ಹಿಂದೂ ವಿರೋಧಿಗಳನ್ನು ಬೆಂಬಲಿಸುವ ಟೈಮ್ ಮ್ಯಾಗಜಿನ್ ಮೋದಿ ವಿರೋಧಿಗಳಿಗೆ ಪವಿತ್ರ ಗ್ರಂಥವಾಗಿರುವುದು ಶೋಚನೀಯ.

ಆದರೆ ಇದು ಒಳ್ಳೆಯ ಬೆಳವಣಿಗೆಯಲ್ಲ. ನಿಮ್ಮ ರಾಜಕೀಯ ಹಗೆತನ, ಪಕ್ಷ ರಾಜಕಾರಣ ನಿಮ್ಮಲ್ಲಿಯೇ ಇರಲಿ. ದೇಶ ಅಥವಾ ದೇಶದ ಮಹಾನ್ ವ್ಯಕ್ತಿಗಳ ಹೆಸರಿಗೆ ಕಳಂಕ ತರುವ ಕೆಲಸ ಮಾಡುವ ಯಾವುದೇ ವಿದೇಶಿ ಶಕ್ತಿ, ಮಾಧ್ಯಮಗಳಿಗೆ ಪ್ರೋತ್ಸಾಹ ಪ್ರಚೋದನೆ ನೀಡಬಾರದು. ಮುಂದೊಂದು ದಿನ ಇದೇ ಶಕ್ತಿಗಳು ನಮ್ಮ ದೇಶದ ಪ್ರಗತಿಗೆ ಮಾರಕವಾಗಬಹುದು ಇರಲಿ ಎಚ್ಚರ.

Edited By : Shivu K
PublicNext

PublicNext

06/10/2022 06:42 pm

Cinque Terre

56.08 K

Cinque Terre

9