ಮುಂಬೈ: ಮಹಾರಾಷ್ಟ್ರದ ಬೋಯಿಸರ್‌ನಲ್ಲಿ ವ್ಯಕ್ತಿಯೊಬ್ಬ ತನ್ನ 21 ವರ್ಷದ ಗೆಳತಿಯನ್ನು ಹಾಡಹಗಲೇ ಗುಂಡಿಕ್ಕಿ ಕೊಂದಿರುವ ವಿಡಿಯೋ ಆನ್‌ಲೈನ್‌ನಲ್ಲಿ ಹರಿದಾಡುತ್ತಿದೆ.
ನೇಹಾ ಮಹತೋ (21) ಮೃತ ದುರ್ದೈವಿಯಾಗಿದ್ದು, ಪ್ರೇಯಸಿಯನ್ನು ಕೊಲೆಗೈದು ಪರಾರಿಯಾಗೋ ವೇಳೆ ಸಂಭವಿಸಿದ ಅಪಘಾತಲ್ಲಿ ಆರೋಪಿ ಶ್ರೀಕೃಷ್ಣ ಯಾದವ್ (26) ಕೂಡ ಸಾವನ್ನಪ್ಪಿದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಆರೋಪಿ ಶ್ರೀಕೃಷ್ಣಸ ದೇಶೀ ನಿರ್ಮಿತ ಪಿಸ್ತೂಲ್ (ನಾಡ ಪಿಸ್ತೂಲ್) ಬಳಸಿ ತನ್ನ ಗೆಳತಿಯ ಬಳಿಗೆ ಬಂದು ಆಕೆಗೆ ಗುಂಡಿಕ್ಕಿದ್ದಾನೆ.
ಇವರಿಬ್ಬರು ಒಂದು ವರ್ಷದಿಂದ ಸಂಬಂಧ ಹೊಂದಿದ್ದರು. ಇತ್ತೀಚೆಗೆ ಯುವಕ ಮದುವೆಯಾಗುವಂತೆ ಕೇಳಿದಾಗ ಮನೆಯಲ್ಲಿ ಒಪ್ಪದಿದ್ದಾಗ ಯುವತಿ ನಿರಾಕರಿಸಿದ್ದಳು ಎನ್ನಲಾಗಿದೆ. ಇದರಿಂದಾಗಿ ಕೋಪಗೊಂಡ ಶ್ರೀಕೃಷ್ಣ ಯಾದವ್ ನೇಹಾರನ್ನು ಸ್ಪಲ್ಪ ದೂರದಿಂದ ಹಿಂಬಾಲಿಸಿಕೊಂಡು ಬಂದು ಜೇಬಿನಲ್ಲಿದ್ದ ಬಂದೂಕು ತೆಗೆದು ಯುವತಿಯ ತಲೆಗೆ ಗುಂಡುಹಾರಿಸಿದ್ದಾನೆ. ಗುಂಡಿನ ಏಟಿಗೆ ನಡು ರಸ್ತೆಯಲ್ಲೇ ಯುವತಿ ಪ್ರಾಣ ಬಿಟ್ಟಿದ್ದಾಳೆ.
ಈ ಸಂಬಂಧ ಮಾಹಿತಿ ನೀಡಿರುವ ಬೋಯಿಸರ್ ಪೊಲೀಸರು, ಕೃತ್ಯ ಎಸಗಿದ ಬಳಿಕ ಸ್ಥಳದಿಂದ ಓಡಿ ಹೋಗುತ್ತಿದ್ದ ಯಾದವ್ಗೆ ಮಿಲಿಟರಿ ಟ್ರಕ್ ವಾಹನ ಡಿಕ್ಕಿಯಾಗಿದ್ದು, ಆತನ ಆಸ್ಪತ್ರೆಗೆ ಸಾಗಿಸುವ ಮುನ್ನವೇ ಸಾವನ್ನಪ್ಪಿದ್ದಾನೆ. ಪ್ರಾಥಮಿಕ ವರದಿಯ ಅನ್ವಯ ಆರೋಪಿಯೇ ಟ್ರಕ್ ಎದುರಿಗೆ ಬಂದು ಆತ್ನಹತ್ಯೆಗೆ ಮುಂದಾಗಿದ್ದ ಎಂದು ತಿಳಿಸಿದ್ದಾರೆ.
PublicNext
30/09/2022 12:32 pm