ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅತ್ತೆ-ಮಾವನನ್ನ ಥಳಿಸಿದ ಸಬ್ ಇನ್ಸ್‌ಪೆಕ್ಟರ್ ಸೊಸೆ; ವಿಡಿಯೋ ವೈರಲ್

ನವದೆಹಲಿ: ದೆಹಲಿಯ ಲಕ್ಷ್ಮಿ ನಗರದಲ್ಲಿ ಸಬ್ ಇನ್ಸ್‌ಪೆಕ್ಟರ್ ತನ್ನ ಅತ್ತೆಯನ್ನು ಥಳಿಸಿದ ಘಟನೆ ನಡೆದಿದೆ. ಈ ವಿಡಿಯೋ ವೈರಲ್ ಆದ ನಂತರ ತಪ್ಪಿತಸ್ಥ ಪೊಲೀಸ್ ಅಧಿಕಾರಿಯ ವಿರುದ್ಧ ಐಪಿಸಿ ಸೆಕ್ಷನ್ 323/427 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ವೈರಲ್ ಆಗಿರುವ ಸಿಸಿಟಿವಿ ದೃಶ್ಯಾವಳಿಗಳಲ್ಲಿ, ಸಬ್ ಇನ್ಸ್‌ಪೆಕ್ಟರ್ ತನ್ನ ತಾಯಿ ಮತ್ತು ಇನ್ನೊಬ್ಬ ಪೊಲೀಸರ ಮುಂದೆ ತನ್ನ ವಯಸ್ಸಾದ ಮಾವನಿಗೆ ಕಪಾಳಮೋಕ್ಷ ಮಾಡುವುದನ್ನು ಕಾಣಬಹುದು. ಪೊಲೀಸರು ಮಧ್ಯಪ್ರವೇಶಿಸುವ ಮೊದಲು ಮಹಿಳೆ ತನ್ನ ಮಾವನ ಮೇಲೆ ಕಪಾಳಮೋಕ್ಷ ಮಾಡುವುದನ್ನು ನೋಡಬಹುದು.

ಹಲ್ಲೆಗೂ ಮುನ್ನ ಮಹಿಳೆ ಮತ್ತು ಆಕೆಯ ತಾಯಿ ಪೊಲೀಸರ ಮುಂದೆಯೇ ವೃದ್ಧನೊಂದಿಗೆ ತೀವ್ರ ವಾಗ್ವಾದ ನಡೆಸಿದ್ದು, ಅದು ಮುಂದುವರಿದು ದೈಹಿಕ ಹಲ್ಲೆಗೆ ತಿರುಗಿ ಮಹಿಳೆ ತನ್ನ ಮಾವನಿಗೆ ಕಪಾಳಮೋಕ್ಷ ಮಾಡಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸರು ಘಟನೆಯ ಬಗ್ಗೆ ಸೂಕ್ತ ಕ್ರಮ ಕೈಗೊಂಡಿದ್ದಾರೆ..

Edited By : Abhishek Kamoji
PublicNext

PublicNext

06/09/2022 08:44 pm

Cinque Terre

69.39 K

Cinque Terre

1