ತುಮಕೂರು: ಕೋಡಿ ಬಿದ್ದು ಮೈದುಂಬಿ ಹರಿಯುತ್ತಿದ್ದ ನೀರಿನಲ್ಲಿ ಬಸ್ ಚಲಾಯಿಸಿ ಚಾಲಕ ಹುಚ್ಚಾಟ ಮೆರೆದಿದ್ದು, ಸ್ತಳೀಯರ ನೆರವಿನಿನಿಂದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕೊರಟಗೆರೆ ತಾಲ್ಲೂಕು ದಾಸಾಲಕುಂಟೆ ಕೆರೆ ಭಾನುವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಕೋಡಿ ಬಿದ್ದು ತುಂಬಿಹರಿಯುತ್ತಿದ್ದು, ಸೋಮವಾರ ತೋವಿನಕೆರೆಯಿಂದ ತುಮಕೂರಿಗೆ ಬರುವ ಖಾಸಗಿ ಬಸ್, ತುಂಬಿ ಹರಿಯುತ್ತಿದ್ದ ನೀರಿನಲ್ಲಿ ಏಕಾಏಕಿ ಸಾಗಿದ ಬಳಿ ಕೋಡಿ ಹಳ್ಳದ ಮದ್ಯದಲ್ಲಿ ನೀರಿನ ರಭಸಕ್ಕೆ ಮುಂದೆ ಸಾಗಲಾಗದೆ ಮದ್ಯದಲ್ಲಿಯೇ ನಿಂತಿದೆ.
ಚಾಲಕನ ಉದ್ದಟತನದಿಂದ ಪ್ರಯಾಣಿಕರು ಜೀವ ಭಯದಿಂದ ಪರದಾಡಿದ್ದಾರೆ. ತಕ್ಷಣವೇ ನೆರವಿಗೆ ಧಾವಿಸಿದ ಸ್ಥಳೀಯರು ಜೆಸಿಬಿ ಹಾಗೂ ಟ್ರಾಕ್ಟರ್ ಬಳಸಿ ಬಸ್ ನೀರಿನಿಂದ ಹೊರತರುವಲ್ಲಿ ಯಶಸ್ವಿಯಾಗಿದ್ದು, ಸ್ತಳದಲ್ಲಿ ಹೆಚ್ಚಿನ ಪೊಲೀಸ್ ನಿಯೋಜನೆ ಮಾಡುವಂತೆ ಗ್ರಾಮಸ್ತರು ಒತ್ತಾಯಿಸಿದ್ದಾರೆ.
PublicNext
05/09/2022 02:19 pm