ಬೆಳಗಾವಿ: ಶಾಸಕ ರಮೇಶ್ ಜಾರಕಿಹೊಳಿ ಆಪ್ತನ ಕಿರುಕುಳಕ್ಕೆ ಬೇಸತ್ತು ಡೆತ್ ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆ.
ನಿನ್ನೆ ಸಂಜೆ ಮಚ್ಚೆ ಗ್ರಾಮದ ನಿವಾಸಿ ಸಾವಿಯೋ ಪಿಳ್ಳೆ(28) ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿರುವ ಯುವಕ. ರಮೇಶ್ ಜಾರಕಿಹೊಳಿ ಆಪ್ತ, ಬಿಜೆಪಿ ಎಸ್.ಸಿ ಮೋರ್ಚಾ ಕಾರ್ಯಕಾರಣಿ ಸದಸ್ಯ ಪೃಥ್ವಿ ಸಿಂಗ್ ಚವ್ಹಾಣ ಹೆಸರು ಜತೆಗೆ ಕ್ಯಾಂಪ್ ಪೊಲೀಸ್ ಠಾಣೆಯ ಪಿಎಸ್ಐ ಹಾಗೂ ಇನ್ನಿಬ್ಬರ ಹೆಸರನ್ನ ಡೆತ್ ನೋಟ್‌ಲ್ಲಿ ಬರೆದಿದ್ದು ಇವರ ಕಿರುಕುಳದಿಂದ ತಾನೂ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸಾವಿಯೋ ಉಲ್ಲೇಖಿಸಿದ್ದಾನೆ.
ಕ್ಯಾಂಪ್ ಪೊಲೀಸ್ ಠಾಣಾ ವ್ಯಾಪ್ತಿಯ ಠಾಣೆಯೋರ್ವಳ ಮಹಿಳೆ ಜತೆಗೆ ಸಾವಿಯೋ ಅಕ್ರಮ ಸಂಬಂಧ ಹೊಂದಿದ್ದ, ಇಬ್ಬರ ನಡುವೆ ಮಸನ್ತಾಪವಾಗಿ ಪ್ರಕರಣ ಕ್ಯಾಂಪ್ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಈ ವೇಳೆ ಪ್ರಕರಣದ ಮಧ್ಯಸ್ಥಿಕೆ ವಹಿಸಿದ್ದ ಪೃಥ್ವಿಸಿಂಗ್ ಪ್ರಕರಣ ಇತ್ಯರ್ಥಗೊಳಿಸಲು ಪಿಎಸ್ಐಗೆ ಒಂದೂವರೆ ಲಕ್ಷ ಹಣ ಬೇಕು ಅಂತಾ ಹೇಳಿ ಸಾವಿಯೋ ಬಳಿ ಹಣ ಪಡೆದಿದ್ದನಂತೆ.
ಇದಾದ ಬಳಿಕಯೂ ಸಮಸ್ಯೆ ಬಗೆಹರಿದಿರುವುದಿಲ್ಲ ಜತೆಗೆ ಆಗಾಗ ಪೃಥ್ವಿಸಿಂಗ್ ಹಣಕ್ಕೆ ಬೇಡಿಕೆ ಇಡುತ್ತಿದ್ದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬರೆದಿಟ್ಟು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇನ್ನೂ ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಯುವತಿಯೋರ್ವಳನ್ನ ಬಂಧಿಸಿರುವ ಪೊಲೀಸರು ಎಸ್ಕೇಪ್ ಆಗಿರುವ ಪೃಥ್ವಿಸಿಂಗ್ ಬಂಧಿಸಲು ಶೋಧ ನಡೆಸುತ್ತಿದ್ದಾರೆ.
ಪ್ರಕರಣದ ಕುರಿತು ಸಾವಿಯೋ ಕುಟುಂಬಸ್ಥರು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದು ಪೊಲೀಸರ ತನಿಖೆಯಿಂದಷ್ಟೇ ಸತ್ಯಾಸತ್ಯತೆ ಹೊರ ಬರಲಿದೆ.
PublicNext
04/09/2022 07:44 pm