ಕೋಲಾರ :ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದಲ್ಲಿರುವ ವೇಣು ಶಾಲೆಯ ಮುಂಭಾಗದಲ್ಲಿ ಮಚ್ಚು, ರಾಡ್‌ನಿಂದ ರಕ್ತ ಬರುವಂತೆ ಬಡಿದಾಡಿಕೊಂಡಿದ್ದಾರೆ. ಸಾರಿಗೆ ಇಲಾಖೆಯ ನಿರ್ವಾಹಕರಾಗಿರುವ ವೇಣು ಎಂಬುವವರ ಮೇಲೆ ಮೀಸಗಾನಹಳ್ಳಿ ಗ್ರಾಮದ ಕೃಷ್ಣಪ್ಪ ಹಾಗೂ ಸಂಬಂಧಿಕರಿಂದ ಹಲ್ಲೆ ನಡೆದಿದೆ.
ಗ್ರಾಮದಲ್ಲಿ ಗಂಗರಾಜ್ ಹಾಗು ಕೃಷ್ಣಪ್ಪ ಎನ್ನುವರ ಮಧ್ಯೆ ರಸ್ತೆ ಜಾಗದ ವಿಚಾರಕ್ಕೆ ತಡರಾತ್ರಿ ಗಲಾಟೆ ನಡೆದಿತ್ತು,ಈ ವೇಳೆ ಗಂಗರಾಜ್‌ಗೆ, ಕಂಡಕ್ಟರ್ ವೇಣು ಬೆಂಬಲಿಸಿದ್ದಕ್ಕೆ ಕೋಪಗೊಂಡು ಹಲ್ಲೆ ನಡೆಸಿದ್ದಾರೆ. ಇನ್ನು ಈ ವೇಳೆ ಗಲಾಟೆಯಲ್ಲಿ ಕೃಷ್ಣಪ್ಪ ತಲೆಗೆ ಗಾಯಗಳಾಗಿದ್ದು, ಬೆಚ್ಚಿ ಬೀಳಿಸುವ ಹಲ್ಲೆಯ ದೃಶ್ಯಗಳು ಸ್ಥಳೀಯರ ಮೊಬೈಲ್ ನಲ್ಲಿ ಸರೆಯಾಗಿದೆ.
ಲಾಠಿ ಚಾರ್ಜ್ ನಡೆಸಿ ಎರಡೂ ಕಡೆಯವರನ್ನ ಶ್ರೀನಿವಾಸಪುರ ಪೊಲೀಸರು ಚದುರಿಸಿ ಪ್ರಕರಣ ದಾಖಲು ಮಾಡಿಕೊಂಡಿದ್ದು, ಎರಡೂ ಕಡೆಯ ಮೂವರು ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
- ರವಿ ಕುಮಾರ್, ಕೋಲಾರ.
PublicNext
04/09/2022 04:03 pm